ಸೃಜನಶೀಲತೆ (Creativity)

ಸೃಜನಶೀಲತೆ (Creativity):“ವಿನೂತನವಾದ ಮತ್ತು ಉಪಯುಕ್ತವಾದ ವಿಷಯ ಅಥವಾ ವಸ್ತುವನ್ನು ರೂಪಿಸುವ ಸಾಮರ್ಥ್ಯವೇ ಸೃಜನಶೀಲತೆ”.
ಬುದ್ಧಿಶಕ್ತಿ ಉತ್ತಮವಾಗಿರುವ ವ್ಯಕ್ತಿಗಳೆಲ್ಲರೂ ಸೃಜನಶೀಲರಾಗಿರುವುದಿಲ್ಲ, ಆದರೆ ಎಲ್ಲ ಸೃಜನಶೀಲರೂ ಸಾಕಷ್ಟು ಬುದ್ದಿಶಕ್ತಿ ಉಳ್ಳವರಾಗಿರುತ್ತಾರೆ. ಸೃಜನಶೀಲತೆಯನ್ನು ಅಡಿಗೆಮನೆಯಿಂದ ಹಿಡಿದು ಉನ್ನತಮಟ್ಟದ ವಿಜ್ಞಾನ, ತಂತ್ರಜ್ಞಾನ, ಸಂಶೋಧನೆವರೆಗೂ ಎಲ್ಲ ಕ್ಷೇತ್ರಗಳಲ್ಲೂ ಕಾಣಬಹುದು. ಉತ್ತಮವಾದ ವಿನೂತನವಾದ ರುಚಿಕರ ಅಡುಗೆ ಮಾಡುವುದೂ ಕೂಡ ಒಂದು ಸೃಜನಶೀಲತೆಯಾಗಿರುತ್ತದೆ. ಉದಾಹರಣೆಗೆ : ಎರಡನೇ ಮಹಾಯುದ್ಧ ಕಾಲದಲ್ಲಿ ಅಕ್ಕಿ ಕೊರತೆ ಇತ್ತು. ಆಗ ಬೆಂಗಳೂರಿನ ಹೆಸರಾಂತ ಉಪಹಾರ ಗೃಹವೊಂದು ಇಡ್ಲಿ ಮಾಡಲು ಅಕ್ಕಿಗೆ ಬದಲು ರವೆ ಬಳಸಿ, ‘ರವೆ ಇಡ್ಲಿ’ ಎಂಬ ವಿನೂತನ ತಿನಿಸು ತಯಾರಿಸಿ ಜನಪ್ರಿಯಗೊಳಿಸಿತು. ರವೆ ಇಡ್ಲಿ ಇಂದಿಗೂ ಜನಪ್ರಿಯ ತಿನಿಸುಗಳಲ್ಲಿ ಒಂದು. ಅದೇ ರೀತಿ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಲೇಖಕರು ಸಾಹಿತ್ಯಗಳನ್ನು ಬರೆದಿದ್ದಾರೆ. ಆದರೆ ಇಂದಿಗೂ ಷೇಕ್ಸ್ಪಿಯರ್ ಹಾಗೂ ಕಾಳಿದಾಸನ ರೀತಿಯಲ್ಲಿ ಸಾಹಿತ್ಯ ರಚಿಸಿದ ಬರಹಗಾರರು ತುಂಬಾ ವಿರಳ ಎಂದೇ ಹೇಳಬಹುದು. ಕಲೆಯಲ್ಲಿ ಎಂ.ಎಫ್.ಹುಸೇನ್, ನೃತ್ಯದಲ್ಲಿ ಮೈಕಲ್ ಜಾಕ್ಸನ್ ಇವರೆಲ್ಲರ ಸೃಜನಶೀಲ ಕೊಡುಗೆಗಳು ಚಿರಕಾಲ ಉಳಿಯುತ್ತವೆ.
ಬಾಲ್ಯದಲ್ಲಿಯೇ ಮಕ್ಕಳಲ್ಲಿ ಸೃಜನಶೀಲತೆಯನ್ನು ಗುರುತಿಸಬಹುದು. ಆದರೆ ಅವುಗಳು ಅಭಿವ್ಯಕ್ತಗೊಳ್ಳಲು ಪ್ರಬುದ್ಧರಾಗುವವರೆಗೂ ಕಾಯಬೇಕು. ಸೃಜನಶೀಲತೆ ಪ್ರಕಟಗೊಳ್ಳಲು ಭಾಷೆ ಹಾಗೂ ಕೌಶಲಗಳ ನೈಪುಣ್ಯತೆ ಅನಿವಾರ್ಯ. ಜೊತೆಗೆ ಸೃಜನಶೀಲತೆ ಪ್ರಕಟಗೊಳ್ಳಲು ಸೂಕ್ತ ಪರಿಸರ ಹಾಗೂ ಪ್ರೋತ್ಸಾಹ ಬೇಕು.
ಬೇರೆ ಬೇರೆ ವ್ಯಕ್ತಿಗಳಲ್ಲಿ ಬೇರೆ ಬೇರೆ ರೀತಿಯ ಸೃಜನಶೀಲತೆಗೆ ಕಾರಣವೇನು? ಅನುವಂಶೀಯತೆ ಮತ್ತು ಪರಿಸರ ಹೇಗೆ ಬುದ್ಧಿಶಕ್ತಿ ಹಾಗೂ ಇತರ ವ್ಯಕ್ತಿತ್ವ ಗುಣಗಳ ಭಿನ್ನತೆಗೆ ಕಾರಣವೋ ಹಾಗೆಯೇ ಸೃಜನಶೀಲತೆಗೂ ಕಾರಣವಾಗಿವೆ. ಜೊತೆಗೆ ಪ್ರೇರಣೆ, ಪ್ರೋತ್ಸಾಹ, ಸೂಕ್ತ ತರಬೇತಿ, ಬದ್ಧತೆ, ಮುಂತಾದ ಅಂಶಗಳು ಸೃಜನಶೀಲತೆಯನ್ನು ಹೆಚ್ಚಿಸುತ್ತವೆ. ಕೆಲವು ವೇಳೆ ಬಡತನದಿಂದ ಹಸಿವು ಕಾಡಿದಾಗ. ಬದುಕಿಗಾಗಿ ಏನಾದರೂ ಹೊಸತನ್ನು ಮಾಡಲು ಯತ್ನಿಸುವುದರಿಂದಲೂ ಸೃಜನಶೀಲತೆ ಅರಳುತ್ತದೆ ಎಂಬುದಕ್ಕೆ ಎಂ.ಎಫ್. ಹುಸೇನ್ ಹಾಗೂ ಯೂಸುಫ್ ಅರಕಲ್ ಉದಾಹರಣೆಯಾಗಿದ್ದಾರೆ. ಎಂ.ಎಫ್.ಹುಸೇನ್ ಹೊಟ್ಟೆಪಾಡಿಗಾಗಿ ಸಿನಿಮಾ ಪೋಸ್ಟರ್ ರಚಿಸುತ್ತಿದ್ದರು. ಕೇರಳದಿಂದ ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ನೆಲೆ ಇಲ್ಲದೆ ರಸ್ತೆ ಬದಿಯಲ್ಲಿ ಮಲಗುತ್ತಿದ್ದ ಯೂಸುಫ್ ಪ್ರಸಿದ್ಧ ಕಲಾವಿದರೆನಿಸಿದರು. ಹೀಗೆ ಬಡತನದ ಬೇಗೆ ಅನೇಕರಲ್ಲಿ ಸೃಜನಶೀಲತೆ ಅರಳಲು ಕಾರಣವಾಗಿರುವುದನ್ನು ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ತಂತ್ರಜ್ಞಾನ, ತಿಂಡಿ-ತಿನಿಸು ತಯಾರಿಕೆ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಕಾಣಬಹುದಾಗಿದೆ.
ಸೃಜನಶೀಲತೆ & ಬುದ್ಧಿಶಕ್ತಿ (Intelligence and Creativity):
ಹೆಚ್ಚು ಬುದ್ಧಿಶಕ್ತಿ ಉಳ್ಳವರೆಲ್ಲರೂ ಸೃಜನಶೀಲತೆ ಹೊಂದಿರುತ್ತಾರೆ ಎಂದು ಹೇಳಲಾಗುವುದಿಲ್ಲ. ಉದಾಹರಣೆಗೆ: ಕಲಿಕೆಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿ ಸೃಜನಶೀಲನಾಗಿರದೆ ಇರಬಹುದು. ಆದರೆ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿ ಹೆಚ್ಚು ಸೃಜನಶೀಲನಾಗಿರುವ ಸಾಧ್ಯತೆ ಇದೆ. ಚಿತ್ರ ಬಿಡಿಸುವುದರಲ್ಲಿ, ಹಾಡುಗಾರಿಕೆಯಲ್ಲಿ, ಮುಂತಾದ ಪಠೇತರ ಚಟುವಟಿಕೆಗಳಲ್ಲಿ ಸೃಜನಶೀಲತೆಯನ್ನು ತೋರಬಹುದು.
1920 ರಲ್ಲಿ ಟರ್ಮನ್ ನಡೆಸಿದ ಅಧ್ಯಯನದಿಂದ ತಿಳಿದುಬಂದಿರುವುದೇನೆಂದರೆ ಅತಿ ಹೆಚ್ಚು ಬುದ್ಧಂಕ (IQ) ಹೊಂದಿರುವ ವ್ಯಕ್ತಿ ಸೃಜನಶೀಲನಾಗಿರಬೇಕೆಂದೇನೂ ಇಲ್ಲ. ಅದೇ ರೀತಿ ಕಡಿಮೆ ಬುದ್ಧಂಕ (IQ) ಇರುವ ವ್ಯಕ್ತಿಯಲ್ಲಿ ಸೃಜನಶೀಲ ಆಲೋಚನೆಗಳು ಬರಬಹುದು. ಸಂಶೋಧನೆಗಳಿಂದ ತಿಳಿದುಬಂದಿರುವ ಮತ್ತೊಂದು ಅಂಶವೆಂದರೆ ಉನ್ನತಮಟ್ಟದ ಹಾಗೂ ಸಾಧಾರಣ ಮಟ್ಟದ ಸೃಜನಶೀಲತೆ ಅತಿ ಬುದ್ದಿವಂತರಲ್ಲಿ ಹಾಗೂ ಸರಾಸರಿ ಬುದ್ಧಿಶಕ್ತಿ ಇರುವವರಲ್ಲಿ ಕೂಡ ಕಂಡುಬರುತ್ತದೆ. ಅದ್ದರಿಂದ ಅತೀ ಬುದ್ದಿವಂತರಲ್ಲಿ ಅತಿ ಹೆಚ್ಚು ಸೃಜನಶೀಲ ಗುಣ ಇರಬೇಕೆಂದೇನೂ ಇಲ್ಲ. ಆದರೆ ಸೃಜನಶೀಲತೆಯನ್ನು ಸಮರ್ಪಕವಾಗಿ ಅಭಿವ್ಯಕ್ತಗೊಳಿಸಲು ಬುದ್ಧಿಶಕ್ತಿ ಅಗತ್ಯ ಎಂದು ಅಧ್ಯಯನಗಳಿಂದ ಧೃಡಪಟ್ಟಿದೆ. ಉದಾಹರಣೆಗೆ : ಒಬ್ಬ ಸೃಜನಶೀಲ ಕಲಾವಿದ ತನ್ನ ಕಲಾಕೃತಿಯ ತಿರುಳನ್ನು ಇತರರಿಗೆ ಮನದಟ್ಟು ಮಾಡಿಕೊಡಲು ಬುದ್ಧಿಶಕ್ತಿ ಬೇಕು. ಹಾಗೆಯೇ ಒಬ್ಬ ವಿಜ್ಞಾನಿ ತನ್ನ ವಿನೂತನ ಸಂಶೋಧನೆಯನ್ನು ಸಮರ್ಥಿಸಿಕೊಳ್ಳಲು ಸಾಕಷ್ಟು ಬುದ್ದಿಶಕ್ತಿ ಇರಬೇಕು. ಸರಾಸರಿ ಬುದ್ಧಿಶಕ್ತಿ ಇರುವ ವ್ಯಕ್ತಿ ಕೂಡ ತನ್ನ ಸೃಜನಶೀಲ ಸಂಶೋಧನೆ ಅಥವಾ ಯಾವುದೇ ಕೊಡುಗೆ ಬಗ್ಗೆ ಸಮರ್ಥವಾಗಿ ವಿವರಣೆ ನೀಡಬಲ್ಲವನಾಗಿರುತ್ತಾನೆ. ಅಂತಿಮವಾಗಿ, ಸೃಜನಶೀಲತೆಯ ಅಭಿವ್ಯಕ್ತಿಗೆ ಸಾಕಷ್ಟು ಬುದ್ಧಿಶಕ್ತಿ ಬೇಕು. ಆದರೆ ಅತಿಯಾದ ಸೃಜನಶೀಲತೆಯ ಅಭಿವ್ಯಕ್ತಿಗೆ ಅತಿಯಾದ ಬುದ್ಧಿಶಕ್ತಿಯ ಅವಶ್ಯಕತೆ ಇಲ್ಲ ಎಂದು ಹೇಳಬಹುದು.
ಇಂದು ದೈನಂದಿನ ಬದುಕಿನಲ್ಲಿ ಬಳಸುವ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳು, ಧರಿಸುವ ಬಟ್ಟೆಗಳು, ಮೋಟಾರು ವಾಹನಗಳು, ಮುಂತಾದವುಗಳಲ್ಲಿ ಹೊಸ ಹೊಸ ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇಂದು ವಿನೂತನವಾದುದು ನಾಳೆ ಹಳೆಯದೆನಿಸಬಹುದು. ಈ ರೀತಿ ವಿನೂತನ ರೀತಿಯ ಮಾದರಿ ವಸ್ತುಗಳು ಆಯಾಯಾ ಕ್ಷೇತ್ರದ ಜನತೆಯ ಸೃಜನಶೀಲತೆಯ ಫಲ.
ಸೃಜನಶೀಲತೆಯನ್ನು ಗುರುತಿಸುವ ಮನೋವೈಜ್ಞಾನಿಕ ಪರೀಕ್ಷೆಗಳು :
ಸೃಜನಶೀಲತೆಯನ್ನು ಗುರುತಿಸುವ ಎಲ್ಲ ಪರೀಕ್ಷೆಗಳ ಪ್ರಮುಖ ಲಕ್ಷಣವೆಂದರೆ. ಅವುಗಳ ಐಟಂಗಳು ತೆರೆದ ಪ್ರಶ್ನೆಗಳಾಗಿರುತ್ತವೆ. ಉತ್ತರಿಸುವ ವ್ಯಕ್ತಿ ಸಾಕಷ್ಟು ಯೋಚಿಸಿ ಉತ್ತರಿಸಲು ಅವಕಾಶ ಇರುತ್ತದೆ. ಈ ಪರೀಕ್ಷೆಗಳ ಪ್ರಶ್ನೆಗಳಿಗೆ ನಿರ್ದಿಷ್ಟ ಉತ್ತರಗಳಿರುವುದಿಲ್ಲ. ಆದ್ದರಿಂದ ಪರೀಕ್ಷಾರ್ಥಿ ವಿವಿಧ ಆಯಾಮಗಳಲ್ಲಿ ಯೋಚಿಸಿ ಉತ್ತರಿಸಲು ಅವಕಾಶ ಇರುತ್ತದೆ. ಪ್ರಶ್ನೆಗಳು ಬಹುಮುಖ ಆಲೋಚನೆಯನ್ನು ಪ್ರಚೋದಿಸುವುದರಿಂದ ಉತ್ತರಿಸುವ ವ್ಯಕ್ತಿ ವಿನೂತನ ಉತ್ತರಗಳನ್ನು ನೀಡುತ್ತಾನೆ ಮತ್ತು ಆತನಲ್ಲಿ ಕಲ್ಪನಾಶಕ್ತಿ ಜಾಗೃತಗೊಳ್ಳುತ್ತದೆ. ಆದರೆ ಬುದ್ಧಿಶಕ್ತಿ ಪರೀಕ್ಷೆಗಳು ಒಂದೇ ಉತ್ತರವನ್ನು ಬಯಸುವುದರಿಂದ ಅವು ಸೃಜನಶೀಲ ಪರೀಕ್ಷೆಗಳಿಗಿಂತ ಭಿನ್ನವಾಗಿರುತ್ತವೆ. ಸೃಜನಶೀಲ ಪರೀಕ್ಷೆಗಳು ವಿಭಿನ್ನ ಉತ್ತರಗಳನ್ನು ಬಯಸುತ್ತವೆ ಮತ್ತು ಕಲ್ಪನಾ ಸಾಮರ್ಥ್ಯದ ಬಳಕೆಗೆ ಒತ್ತು ನೀಡುತ್ತವೆ. ಆದರೆ ಬುದ್ಧಿಶಕ್ತಿ ಪರೀಕ್ಷೆಗಳು ಒಂದೇ ಸರಿಯಾದ ಉತ್ತರವನ್ನು ಬಯಸುತ್ತವೆ ಮತ್ತು ಏಕಮುಖ ಆಲೋಚನೆಯನ್ನು ಪ್ರಚೋದಿಸುತ್ತವೆ.
ವಯಸ್ಸು ಮತ್ತು ಸೃಜನಶೀಲತೆ :-
ವಯಸ್ಸಾದಂತೆ ಸೃಜನಶೀಲತೆ ಕಡಿಮೆಯಾಗುತ್ತದೆಯೆ? ಈ ಬಗ್ಗೆ ಅನೇಕ ಅಧ್ಯಯನಗಳು ನಡೆದಿವೆ. ಸಿಮೋಂಟನ್ (1990), ಪ್ರಕಾರ ವಯಸ್ಸಾದಂತೆ ಸೃಜನಶೀಲತೆ ಕಡಿಮೆಯಾಗುತ್ತದೆ. ಇತರ ಅಧ್ಯಯನಗಳ ಪ್ರಕಾರ ಕೆಲವು ವಿಜ್ಞಾನಿಗಳು, ಬರಹಗಾರರು, ಕವಿಗಳು, ಎಂ.ಎಫ್.ಹುಸೇನ್‌ರಂತಹ ಕಲಾವಿದರು 80-90 ವಯಸ್ಸಿನಲ್ಲೂ ಸಹ ಅದ್ಭುತ ಸಾಧನೆಗಳನ್ನು ಮಾಡಿದ್ದಾರೆ. ಆದ್ದರಿಂದ ಬಹು ಜನರಲ್ಲಿ ಸೃಜನಶೀಲತೆ 30-50 ರ ಆಸುಪಾಸಿನಲ್ಲಿ ಗರಿಷ್ಠಮಟ್ಟವನ್ನು ತಲುಪುತ್ತದೆ. ಆದರೆ ಕೆಲವರಲ್ಲಿ ಮಾತ್ರ 80 ರ ಆಸುಪಾಸಿನಲ್ಲಿ ಸೃಜನಶೀಲತೆ ಗರಿಷ್ಠ ಮಟ್ಟವನ್ನು ತಲಪುತ್ತದೆ.
ಸೃಜನಶೀಲ ಪರೀಕ್ಷೆಗಳನ್ನು ರಚಿಸಿದ ಪ್ರಮುಖ ಮನೋವಿಜ್ಞಾನಿಗಳೆಂದರೆ, ಗಿಲ್ನೋರ್ಡ್, ಟೊರೆನ್ಸ್, ವಾಲಚ್ ಮತ್ತು ಕೂಗನ್. ಭಾರತದಲ್ಲಿ ಪರಮೇಶ್, ಬಾಕರ್ ಮೆಹದಿ, ಮುಂತಾದವರು.
▪️ಸೃಜನಶೀಲ ವ್ಯಕ್ತಿಗಳು ಈ ಕೆಳಕಂಡ ಗುಣಲಕ್ಷಣಗಳನ್ನು ಹೊಂದಿರುತ್ತಾರೆ :
▪️ಸ್ವಯಂ ಪ್ರೇರಣೆ, ನಾವಿನ್ಯತೆ, ಸಮಾಯೋಜನೆಯನ್ನು ಹೊಂದಿರುವ ವಿಶಿಷ್ಟ ವ್ಯಕ್ತಿಯಾಗಿರುತ್ತಾರೆ.
▪️ಸಮಾಜ ಒಪ್ಪಿಕೊಂಡ ವರ್ತನೆಗಿಂತ ಮುಂದುವರೆದು ಯೋಚಿಸಬಲ್ಲವನಾಗಿರುತ್ತಾರೆ.
▪️ಸಮಸ್ಯೆ ಪರಿಹರಿಸುವಾಗ ಒಳನೋಟಗಳನ್ನು ಪಡೆಯುತ್ತಾರೆ.
▪️ನಿರ್ಣಾಯಕ ವಿಷಯದಲ್ಲಿ ಸ್ವತಂತ್ರ ತೀರ್ಮಾನ ತೆಗೆದುಕೊಳ್ಳಬಲ್ಲರು.
▪️ರಚನಾತ್ಮಕ ಟೀಕೆ ಮಾಡುವವನಾಗಿರುತ್ತಾರೆ.
▪️ವಿಭಿನ್ನ ಚಿಂತನಾ ಸಾಮರ್ಥ್ಯವನ್ನು ಹೊಂದಿರುತ್ತಾರೆ.
▪️ಸಾಮಾನ್ಯವಾಗಿ ಅಂತರ್ಮುಖ ಮತ್ತು ಒಂಟಿತನ ಪ್ರೇಮಿಯಾಗಿರುತ್ತಾರೆ.
▪️ತಮಗಿಷ್ಟವಾದ ಕ್ಷೇತ್ರದಲ್ಲಿ ವಿಶಿಷ್ಟವಾದ ಕೊಡುಗೆಯನ್ನು ನೀಡಬಲ್ಲರು.
▪️ಇವರ ಕಲ್ಪನಾ ಶಕ್ತಿ ಉತ್ತಮವಾಗಿರುತ್ತದೆ.
▪️ಇವರಲ್ಲಿ ಪ್ರಶ್ನಿಸುವಿಕೆ ಹೆಚ್ಚಾಗಿರುತ್ತದೆ.
▪️ಇವರು ತಮ್ಮ ಮನಸ್ಸಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವವನಾಗಿರುತ್ತಾರೆ.
ಸೃಜನಶೀಲತೆಯನ್ನು ಅಭಿವೃದ್ಧಿಪಡಿಸುವ ಕ್ರಮಗಳು:
▪️ಶಿಕ್ಷಕರು ಮಕ್ಕಳಿಗೆ ಮುಕ್ತ ಮತ್ತು ಸ್ವತಂತ್ರ ವಾತಾವರಣವನ್ನು ಒದಗಿಸಿಕೊಡುವುದು.
▪️ಅವರ ನಾಚಿಕೆ ಸ್ವಭಾವ ತೊಲಗಿಸಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು.
▪️ಅವರಲ್ಲಿ ವಿಮರ್ಶಾತ್ಮಕ ಚಿಂತನೆ, ವೈಚಾರಿಕತೆ, ವಿಭಿನ್ನ ಆಲೋಚನಾ ಸಾಮರ್ಥ್ಯ ವೃದ್ಧಿಯಾಗುವಂತೆ ಪ್ರೋತ್ಸಾಹಿಸಬೇಕು.
▪️ಮನಮಂಥನ ಅಥವಾ ಬುದ್ಧಿಮಂಥನ (Brain Storming) ವಿಧಾನಗಳ ಮೂಲಕ ವಿಚಾರಗಳ ನಿರರ್ಗಳತೆಯನ್ನು ಹೆಚ್ಚಿಸಬೇಕು. ಸಮಸ್ಯೆಗಳನ್ನು ನೀಡಿ ವಿಭಿನ್ನ ಪರಿಹಾರಗಳನ್ನು ಸೂಚಿಸುವಂತೆ ತಿಳಿಸುವುದು. ಅದರಲ್ಲಿ ಅತ್ಯಂತ ಸೂಕ್ತವಾದ ಪರಿಹಾರವನ್ನು ಆಯ್ಕೆ ಮಾಡಿಕೊಂಡು ಸಮಸ್ಯೆ ಪರಿಹರಿಸುವಂತೆ ಕೇಳುವುದು.
▪️ಸೂಕ್ತವಾಗಿ ಅಭಿಪ್ರೇರೇಪಿಸಬೇಕು. ವಿದ್ಯಾರ್ಥಿಗಳಲ್ಲಿ ಆಸಾಧಾರಣ ಸೃಜನಶೀಲತೆ ಕಂಡು ಬಂದಾಗ ಆಯಾ ಕ್ಷೇತ್ರದ ಪರಿಣಿತರಿಂದ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ನೀಡಬೇಕು.
▪️ವಿಜ್ಞಾನ ವಸ್ತು ಪ್ರದರ್ಶನ, ಕಲಾಪ್ರದರ್ಶನ ಸಾಹಿತ್ಯ ಗೋಷ್ಠಿ ಮುಂತಾದವುಗಳನ್ನು ಆಯೋಜಿಸಿ ಮಗುವಿನ ಪ್ರತಿಭಾ ವಿಕಸನಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು.
ಭಾಷೆ ಮತ್ತು ಆಲೋಚನೆ:
ಪಿಯಾಜೆಯವರು ಜ್ಞಾನಾತ್ಮಕ ವಿಕಾಸದ ವಿಭಿನ್ನ ಹಂತಗಳಲ್ಲಿ ಭಾಷೆಯು ಯಾವ ರೀತಿಯಾಗಿ ವಿಕಾಸಗೊಳ್ಳುತ್ತದೆ ಎಂಬುದನ್ನು ಸೂಚಿಸಿರುತ್ತಾರೆ. ಇವರಷ್ಟೇ ಅಲ್ಲದೆ ಹೆರಾಲ್ಡ್ ವೆಟ್ಟರ್ ಮತ್ತು ರಿಚರ್ಡ್ ಹೊವೆಲ್ ಹಾಗೂ ಎಲಿಜಬೆತ್ ಹಾಕ್ ಇವರುಗಳು ಮಕ್ಕಳ ಭಾಷಾ ವಿಕಾಸದ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ್ದಾರೆ. ಭಾಷಾ ವಿಕಾಸವು ಮಗುವಿನ ಧ್ವನ್ಯಂಗಗಳ ಬೆಳವಣಿಗೆ ಮತ್ತು ಪಕ್ವತೆ, ಬುದ್ದಿಶಕ್ತಿಯ ಬೆಳವಣಿಗೆ ಹಾಗೂ ಮಗುವಿನ ವಯಸ್ಸು ಇವುಗಳ ಮೇಲೆ ಅವಲಂಬಿತವಾಗಿರುತ್ತದೆ.
ಸಾಮಾನ್ಯವಾದ ಮಗುವಿನ ಭಾಷಾ ವಿಕಾಸದಲ್ಲಿ ಕಂಡುಬರುವ ಹಂತಗಳು ಈ ರೀತಿಯಾಗಿವೆ
1. ಭಾಷಾ ಪೂರ್ವ ಹಂತ
1. ಒಂದರಿಂದ ಮೂರು ತಿಂಗಳು ಆಳುವಿಕೆ. ಕೂಗುವುದು ಅಸಂಬದ್ಧ ಧ್ವನಿ
2. ನಾಲ್ಕರಿಂದ ಆರು ತಿಂಗಳು -ತೊದಲುವಿಕೆ, ಇತರರು ಮಾತನಾಡಿಸಿದಾಗ ಧ್ವನಿ ಹೊರಡಿಸುವುದು
3. ಏಳರಿಂದ 11 ತಿಂಗಳು – ಕೇಕೆ ಹಾಕುವುದು, ಧ್ವನಿ ಪುನರುತ್ಪಾದಿಸುವಿಕೆ ಇತರರ ಧ್ವನಿಯನ್ನು ಅನುಕರಿಸುವುದು
2. ಏಕಪದ ಉಚ್ಚಾರಣೆಯ ಹಂತ
ಪದಗಳನ್ನು ಅನುಕರಣೆಯ ಮೂಲಕ ಕಲಿಯುವಿಕೆ
12 ತಿಂಗಳು -ಮೊದಲ ಪದ ಉಚ್ಚಾರಣೆ (ಒಂದರಿಂದ ಮೂರು ಪದಗಳ ವರೆಗೆ)
18 ನೇ ತಿಂಗಳು- ಒಂದು ಪದದ ಪದಗಳು (18 ರಿಂದ 22 ಪದಗಳು ಉದಾಹರಣೆಗೆ : ಅಮ್ಮ, ಅಪ್ಪ, ಅಜ್ಜಿ, ಹಾಲು, ನಾಯಿ ಇತ್ಯಾದಿ. ಯಾವ ಪದಗಳನ್ನು ಹೆಚ್ಚು ತೊದಲುತ್ತಾನೋ ಆ ಪದಗಳ ಉಚ್ಚಾರವನ್ನು ಬೇಗ ಕಲಿಯುತ್ತಾನೆ.





ಇದೇ ತರ ಮಾಹಿತಿ ಕೊಡಿ ಸಾರ್
Ok sir