Environmental Effects on Human Behavior: ಮಾನವನ ವರ್ತನೆ ಮೇಲೆ ಪರಿಸರದ ಪ್ರಭಾವ (Environmental Effects on Human Behavior):-

Environmental Effects on Human Behavior: ಮಾನವನ ವರ್ತನೆ ಮೇಲೆ ಪರಿಸರದ ಪ್ರಭಾವ (Environmental Effects on Human Behavior)

Environmental Effects on Human Behavior

Environmental Effects on Human Behavior: ಮಾನವ-ಪರಿಸರಗಳು ಪರಸ್ಪರ ಪ್ರಭಾವ ಬೀರುತ್ತವೆ ಮತ್ತು ತಮ್ಮ ಉಳಿವಿಗಾಗಿ ಪರಸ್ಪರ ಅವಲಂಬಿತರಾಗಿದ್ದಾರೆ. ಮಾನವನ ಮೇಲೆ ಪರಿಸರದ ಪ್ರಭಾವವನ್ನು ಕೆಳಕಂಡ ವಿಷಯಗಳಲ್ಲಿ ಪ್ರಮುಖವಾಗಿ ಕಾಣಬಹುದಾಗಿದೆ.

ಪರಿಸರದ ಕೆಲವು ಅಂಶಗಳು ಮಾನವನ ಗ್ರಹಿಕೆ ಮೇಲೆ ಪ್ರಭಾವ ಬೀರುತ್ತವೆ. ಉದಾಹರಣೆಗೆ, ಆಫ್ರಿಕಾದ ಬುಡಕಟ್ಟು ಜನರು ವೃತ್ತಾಕಾರದ ಗುಡಿಸಲುಗಳಲ್ಲಿ ವಾಸಿಸುತ್ತಾರೆ. ಆದ್ದರಿಂದ ಅವರಲ್ಲಿ ‘ಮುಲ್ಲರ್-ಲೈರ್’ ಭ್ರಮೆ ಕಡಿಮೆ. ಆದರೆ ನಗರದ ಜನ ಚೌಕಾರದ ಮನೆಗಳಲ್ಲಿ ವಾಸಿಸುವುದರಿಂದ ಅವರಲ್ಲಿ ಭ್ರಮೆ ಹೆಚ್ಚಾಗಿರುತ್ತದೆ.

ನಮ್ಮ ಭಾವನೆಗಳ ಮೇಲೆ ಪರಿಸರ ಪ್ರಭಾವ ಬೀರುತ್ತದೆ. ಉದಾಹರಣೆಗೆ, ಹರಿಯುವ ನದಿಗಳು ಸುಂದರ ಅರಣ್ಯಗಳು, ಅರಳಿದ ಹೂಗಳು, ಚಿಲಿಪಿಲಿ ಗುಟ್ಟುವ ಹಕ್ಕಿಗಳು, ಇವೆಲ್ಲವನ್ನು ನೋಡಿದಾಗ ಕಣ್ಣಿಗೆ, ಮನಸ್ಸಿಗೆ ಆನಂದವಾಗುತ್ತದೆ. ಆದರೆ ಭೂಕಂಪ, ಪ್ರವಾಹ, ಬರಗಾಲ, ಮುಂತಾದ ಪ್ರಕೃತಿ ವಿಕೋಪಗಳನ್ನು ಅನುಭವಿಸಿದಾಗ ದುಃಖ, ಖಿನ್ನತೆ, ಬೇಸರ, ಅಸಹಾಯಕತೆ ಕಂಡು ಬರುತ್ತದೆ. ಇಂತಹ ಆಘಾತಕಾರಿ ಅನುಭವಗಳು ಅಚ್ಚಳಿಯದೆ ಮನಸ್ಸಿನಲ್ಲಿ ಚಿರಕಾಲ ಉಳಿದು ಬಿಡುತ್ತವೆ. ಇದನ್ನು “ಘಟನೋತ್ತರ ಪ್ರತಿಬಲನ” (Post traumatic stress disorder-PTSD).

3. ವೃತ್ತಿ, ಜೀವನಶೈಲಿ ಹಾಗೂ ಮನೋಭಾವಗಳ ಮೇಲೆ ಜೀವ ಪರಿಸರದ ಪ್ರಭಾವ (Ecological Influences on Occupation, Living style and Attitudes) :-

ನಾವು ಮಾಡುವ ವೃತ್ತಿಗಳು, ನಮ್ಮ ಜೀವನ ಶೈಲಿ ಹಾಗೂ ಮನೋಭಾವಗಳ ಮೇಲೆ ಪ್ರಭಾವ ಬೀರುತ್ತದೆ. ಉದಾಹರಣೆಗೆ, ಕೃಷಿ ಅವಲಂಬಿಸಿ ಬದುಕು ಸಾಗಿಸುವ ಜನರು ಶ್ರಮ ಪಟ್ಟು ದುಡಿಯ ಬೇಕು. ಕೃಷಿ ಕೆಲಸ ಒಬ್ಬರಿಂದ ಸಾಗುವುದಿಲ್ಲ. ಹಲವು ಜನರು ಒಟ್ಟಿಗೆ ಸೇರಿ ದುಡಿಯಬೇಕು. ಆದ್ದರಿಂದ ಅವರಲ್ಲಿ ಸಹಕಾರ ಮನೋಭಾವ ಬೆಳೆಯುತ್ತದೆ. ಅವರು ಪ್ರಕೃತಿಗೆ ಹತ್ತಿರವಾಗಿ ಬದುಕುವುದರಿಂದ ಮಳೆಗಾಲದ ಮೇಲೆ ಅವರ ವೃತ್ತಿ ಅವಲಂಬಿಸಿರುತ್ತದೆ. ಕೆಲವು ವೇಳೆ ಮಳೆ ಸರಿಯಾಗಿ ಬೀಳದೆ ಬದುಕು ಕಷ್ಟವಾಗಬಹುದು, ಆದ್ದರಿಂದ ಕೃಷಿಕರು ಅದೃಷ್ಟದಲ್ಲಿ ಹೆಚ್ಚು ನಂಬಿಕೆ ಇಡುತ್ತಾರೆ.

ನಗರ ಪ್ರದೇಶದ ಜನರು, ಕಛೇರಿ, ಕೈಗಾರಿಕೆಗಳಲ್ಲಿ ದುಡಿಯುವವರು ಪ್ರಕೃತಿಯಿಂದ ದೂರ ಇರುತ್ತಾರೆ. ಅವರಲ್ಲಿ ಸ್ವಂತ ಆಲೋಚನೆ, ಸ್ಪರ್ಧಾತ್ಮಕ ಮನೋಭಾವ ಕಂಡುಬರುತ್ತದೆ. ಹೀಗೆ ಜೀವ ಪರಿಸರ ನಮ್ಮ ವರ್ತನೆ ಮೇಲೆ ಪ್ರಭಾವ ಬೀರುತ್ತದೆ.

ಪರಿಸರ, ಮಾನವನ ಮೇಲೆ ಪ್ರಭಾವ ಬೀರುವಂತೆ ಮಾನವ ಕೂಡ ಪರಿಸರದ ಮೇಲೆ ಪ್ರಭಾವ ಬೀರುತ್ತಾನೆ. ಮನೆ ಕಟ್ಟಲು ಸಿಮೆಂಟ್, ಇಟ್ಟಿಗೆ ತಯಾರಿಸುತ್ತಾನೆ. ಇವುಗಳನ್ನು ತಯಾರಿಸುವಾಗ ಉತ್ಪತ್ತಿಯಾಗುವ ಹೊಗೆ ಗಾಳಿಯನ್ನು ಮಲಿನಗೊಳಿಸುತ್ತದೆ. ಮನೆಯಲ್ಲಿ ಬಳಸುವ ಫ್ರಿಜ್ (ಶೀತಲಯಂತ್ರ), ಹವಾನಿಯಂತ್ರಕಗಳಿಂದ ಹೊರಡುವ ಸಿ.ಎಫ್.ಸಿ (ಕ್ಲೋರೋ ಫ್ಲೋರೋ ಕಾರ್ಬನ್) ಎಂಬ ಅನಿಲ ವಿಷಾನಿಲವಾಗಿದ್ದು, ಓಜೋನ್ ಪದರವನ್ನು ಹಾಳು ಮಾಡುತ್ತದೆ. ಇದರಿಂದ ಸೂರ್ಯನಿಂದ ಬರುವ ನೀಲಾತೀತ (Ultraviolet rays) ಕಿರಣಗಳು ನೇರವಾಗಿ ಮಾನವನ ಮೇಲೆ ಬೀಳುವುದರಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಬರುತ್ತವೆ. ಕೈಗಾರಿಕೆಗಳಿಂದ ಹೊರಡುವ ಹೊಗೆ ಹಾಗೂ ತ್ಯಾಜ್ಯ ವಸ್ತುಗಳಲ್ಲಿ ಮಾರಕ ರಾಸಾಯನಿಕಗಳಿದ್ದು ಜೀವರಾಶಿಗಳಿಗೆ ಹಾನಿಯುಂಟು ಮಾಡುತ್ತವೆ. ಕೈಗಾರಿಕೆಗಳಿಗಾಗಿ, ಮನೆ ಕಟ್ಟಲು ಮರಗಳನ್ನು ಹೇರಳವಾಗಿ ಕಡಿಯುವುದರಿಂದ ಕಾಡು ನಾಶವಾಗುತ್ತಿದೆ. ಇದರಿಂದ ಮಳೆ ಪ್ರಮಾಣ ಕಡಿಮೆಯಾಗಿ, ಮರುಭೂಮಿ ಹೆಚ್ಚುತ್ತಿದೆ. ಭೂಮಿಯ ಶಾಖ ಏರುತ್ತಿದೆ. ಕೈಗಾರಿಕೀಕರಣ ಮಾನವನ ಪ್ರಗತಿಗೆ ಪ್ರೇರಕವಾಗುವ ಬದಲು ಮಾರಕವಾಗಿ ಪರಿಣಮಿಸುತ್ತಿದೆ. ಜನರು ಹಿಂದೆಂದಿಗಿಂತ ಇಂದು ಹೆಚ್ಚು ಮಾನಸಿಕ ಹಾಗೂ ದೈಹಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ಪರಿಸರ ಪ್ರತಿಬಲನಕಾರಕಗಳು ಎಂದರೆ ವಾಯುಮಾಲಿನ್ಯ, ಶಬ್ದಮಾಲಿನ್ಯ ಅತಿಯಾದ ಜನಸಂದಣಿ. ಪ್ರಕೃತಿ ವಿಕೋಪಗಳಾದ, ಪ್ರವಾಹ, ಭೂಕಂಪ ಮುಂತಾದವು. ಇವುಗಳು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ.

ಮನಸ್ಸಿಗೆ ಕಿರಿಕಿರಿಯುಂಟು ಮಾಡುವ ಯಾವುದೇ ಸದ್ದನ್ನು ‘ಶಬ್ದ’ (ಗದ್ದಲ) ಎನ್ನುವರು. ನಿರಂತರವಾಗಿ ಜೋರು ಶಬ್ದಕ್ಕೆ ಒಳಗಾದವರಿಗೆ ಕಿವುಡು ಉಂಟಾಗಬಹುದು. ಜೊತೆಗೆ, ಅತಿಕೋಪ, ಹೃದಯ ಸಂಬಂಧೀ ರೋಗಗಳು ಬರಬಹುದು. ಮನಸ್ಸಿನ ಏಕಾಗ್ರತೆ ತಗ್ಗುತ್ತದೆ. ಮಾನಸಿಕ ಸಾಮರ್ಥ್ಯ ಕಡಿಮೆಯಾಗುತ್ತದೆ. ರಕ್ತದ ಒತ್ತಡ ಏರುತ್ತದೆ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತದೆ.

ಮಾಲಿನ್ಯ (pollution) :-

ಗಾಳಿ, ನೀರು, ಮಣ್ಣು ಮಲಿನಗೊಳ್ಳುವುದೇ ಮಾಲಿನ್ಯ, ನೀರಿನಲ್ಲಿ ಕಾರ್ಖಾನೆಗಳಿಂದ ಹೊರಡುವ ವಿಷಪೂರಿತ ರಾಸಾಯನಿಕಗಳು ಬೆರೆಯುವುದರಿಂದ ಆ ನೀರನ್ನು ಬಳಸುವ ಸಸ್ಯಗಳು, ಪ್ರಾಣಿಗಳು ಹಾಗೂ ಮನುಷ್ಯ ವಿವಿಧ ರೋಗಗಳಿಂದ ಬಳಲುತ್ತಾರೆ. ವಾಯು ಮಾಲಿನ್ಯದಿಂದ ಶ್ವಾಸಕೋಶ ಕಾಯಿಲೆಗಳು, ಹೃದಯ ಕಾಯಿಲೆಗಳು ಹೆಚ್ಚಾಗುತ್ತವೆ. 1984ರಲ್ಲಿ ಭೂಪಾಲ್‌ನಲ್ಲಿ ಸಂಭವಿಸಿದ ಅನಿಲ ದುರಂತದಲ್ಲಿ ನೂರಾರು ಜನರು ಸತ್ತರು, ಸಾವಿರಾರು ಜನರು ಕಣ್ಣು ಕಳೆದುಕೊಂಡರು. ಇದಕ್ಕೆ ಕಾರಣ ಗಾಳಿಯಲ್ಲಿ “ಮಿಥೈಲ್ ಸಯೊನೇಟ್” ಎಂಬ ವಿಷ ಅನಿಲ ಬೆರೆತುಕೊಂಡಿತ್ತು.

ಬೀಡಿ, ಸಿಗರೇಟ್ ಸೇವನೆಯಿಂದ ಕ್ಯಾನ್ಸರ್, ಹೃದಯ ಕಾಯಿಲೆಗಳು ಬರುತ್ತವೆ. ನಿಷ್ಕ್ರಿಯ ಸೇವನೆ (Passive smokers) ಮಾಡುವವರಿಗೆ (ಸಿಗರೇಟ್ ಸೇದುವವರ ಸಮೀಪ ಇರುವವರು) ಅಪಾಯ ಜಾಸ್ತಿ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

ಕಾರ್ಖಾನೆಗಳ ವಿಷವಸ್ತುಗಳು ಮಣ್ಣಿನಲ್ಲಿ ಸೇರಿ ಮಣ್ಣು ವಿಷವಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಬೆಳೆಗಳು ಬೆಳೆಯುವುದಿಲ್ಲ. ಬೆಳೆದರೂ ಅವುಗಳಲ್ಲಿ ವಿಷವಸ್ತು ಇದ್ದು ಅವುಗಳನ್ನು ತಿಂದವರಿಗೆ ಕಾಯಿಲೆಗಳು ಹೆಚ್ಚಾಗುತ್ತಿವೆ.

ಇವೆಲ್ಲವೂ ಪರಿಸರದ ಮೇಲೆ ಮಾನವ ನಡೆಸುತ್ತಿರುವ ದೌರ್ಜನ್ಯಗಳು. ಇವುಗಳನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

ಮಾಲಿನ್ಯ ತಡೆಗಟ್ಟುವ ಕ್ರಮಗಳು:-

1. ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು.

2. ತ್ಯಾಜ್ಯ ವಸ್ತುಗಳ ಸೂಕ್ತ ವಿಲೇವಾರಿ.

ಕೈಗಾರಿಕೆಗಳ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡುವುದು. 3.

4. ಸಾರ್ವಜನಿಕ ವಾಹನಗಳ ಬಳಕೆ ಮತ್ತು ಸೈಕಲ್ ಬಳಕೆ ಹೆಚ್ಚು ಮಾಡುವುದು.

5. ಹೆಚ್ಚು ಹೆಚ್ಚು ಗಿಡಮರಗಳನ್ನು(ನಗರಗಳಲ್ಲಿ)ಬೆಳೆಸುವುದು, ಮುಂತಾದವು.

ಯಾವುದೇ ಗೊತ್ತುಗುರಿ ಇಲ್ಲದೆ ಅಧಿಕ ಜನರು ಒಂದೆಡೆ ತಾತ್ಕಾಲಿಕವಾಗಿ ಸೇರುವುದಕ್ಕೆ ಜನಸಂದಣಿ ಎನ್ನುವರು. ಉದಾ:-ಒಂದು ಸಿನಿಮಾ ಶೂಟಿಂಗ್ ನಡೆಯುವಾಗ ಇದ್ದಕ್ಕಿದ್ದಂತೆ ನೂರಾರು ಜನರು ಅಲ್ಲಿ. ಬಂದು ಸೇರುತ್ತಾರೆ. ಆದರೆ ಜನದಟ್ಟಣೆ ಬೇರೆ ಅರ್ಥ ನೀಡುತ್ತದೆ. ಅತಿಯಾದ ಜನನಿಬಿಡತೆಯಿಂದ ಒಂದು ರೀತಿಯ ಕಿರಿಕಿರಿ ಉಂಟಾಗುತ್ತದೆ, ಇದರಿಂದ ಜನರ ಏಕಾಂತಕ್ಕೆ ಭಂಗ ಉಂಟಾಗುತ್ತದೆ.

ಜನದಟ್ಟಣೆಯ ಕೆಲವು ಲಕ್ಷಣಗಳು:

1. ಕಿರಿಕಿರಿಯ ಅನುಭವ.

2. ಏಕಾಂತಕ್ಕೆ ಭಂಗ ಉಂಟಾಗುವುದು.

3. ಸಾಮಾಜಿಕ ಸಂಪರ್ಕದ ಮೇಲೆ ನಿಯಂತ್ರಣ ಇಲ್ಲದಿರುವುದು.

ಜನದಟ್ಟಣೆಯ ಬಗ್ಗೆ ನಡೆದ ಅಧ್ಯಯನಗಳಿಂದ ತಿಳಿದುಬಂದ ಕೆಲವು ಅಂಶಗಳು ಕೆಳಕಂಡಂತಿವೆ.

ಅತಿಯಾದ ಜನದಟ್ಟಣೆ ಅಪಸಾಮಾನ್ಯ ವರ್ತನೆಗೆ ಕಾರಣವಾಗುತ್ತದೆ.

ಜನದಟ್ಟಣೆಯಲ್ಲಿ ಸಾಧನೆ ಕುಗ್ಗುತ್ತದೆ.

ಜನದಟ್ಟಣೆಯಲ್ಲಿ ಬೆಳೆದ ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳುವರು.

ಹೀಗೆ ಜನದಟ್ಟಣೆಯಿಂದ ಅನೇಕ ತೊಂದರೆಗಳು ಎದುರಾಗುತ್ತವೆ.

ಪರಿಸರದ ಪ್ರತಿಬಲನಗಳಾದ ಶಬ್ದ, ಜಲ, ವಾಯುಮಾಲಿನ್ಯ ಮತ್ತು ಜನದಟ್ಟಣೆ. ಇವು ಮಾನವನಿಂದ ನಿರ್ಮಿತವಾದವುಗಳು. ಆದರೆ ಪ್ರಕೃತಿ ವಿಕೋಪಗಳು ಪ್ರತಿಬಲನಕಾರಿ ಆ ಗ ಪ್ರಕೃತಿ ವಿಕೋಪದಿಂದ ಉಂಟಾಗುತ್ತವೆ. ಪ್ರಮುಖ ಪ್ರಕೃತಿ ವಿಕೋಪಗಳೆಂದ 192/260 ಚಂಡಮಾರುತ ಹಾಗೂ ಜ್ವಾಲಾಮುಖಿಗಳು.

ಪ್ರಕೃತಿ ವಿಕೋಪಗಳುಂಟಾದಾಗ ಜನರು ಮನೆಮಠ ಕಳೆದುಕೊಳ್ಳುತ್ತಾರೆ. ಜೊತೆಗೆ ಸರ್ವಸ್ವವೂ ನಾಶವಾಗುತ್ತದೆ. ಇದರಿಂದ ಅವರಿಗೆ ಮಾನಸಿಕ ಆಘಾತವಾಗುತ್ತದೆ ಮತ್ತು ಗಂಭೀರವಾದ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ. ಪ್ರಕೃತಿ ವಿಕೋಪಗಳು ಆಘಾತಕಾರಿ ಅನುಭವಗಳು. ಅಂದರೆ ಪ್ರಕೃತಿ ವಿಕೋಪದಿಂದ ಬದುಕುಳಿದವರಿಗೆ ಅಳಿಸಲಾಗದ ಮಾನಸಿಕ ಆಘಾತ ಉಂಟಾಗುತ್ತದೆ. ಇದನ್ನು “ಘಟನೋತ್ತರ ಪ್ರತಿಬಲನ” (Post traumatic stress disorder-PTSD) ಎಂದು ಕರೆಯುವರು. ಪ್ರಕೃತಿ ವಿಕೋಪದಿಂದ ಮಾನಸಿಕ ಆಘಾತವಾದಾಗ ಮನುಷ್ಯನ ಪ್ರತಿಕ್ರಿಯೆಗಳೆಂದರೆ:

ಅವರ ಕಣ್ಣನ್ನು ಅವರೇ ನಂಬದಂತೆ ಆಗುತ್ತದೆ. ಅಂದರೆ ಅಲ್ಲಿ ಆಗಿರುವ ವಿಪತ್ತನ್ನು ಅವರ ಮನಸ್ಸು ಒಪ್ಪಿಕೊಳ್ಳಲು ತಯಾರಿರುವುದಿಲ್ಲ.

ದೈಹಿಕ ಪ್ರತಿಕ್ರಿಯೆ:- ದೈಹಿಕ ಸುಸ್ತು, ನಿದ್ರಾಹೀನತೆ, ರಕ್ತದೊತ್ತಡ ಮತ್ತು ಹೃದಯ ಬಡಿತ ಏರುತ್ತದೆ.

ಭಾವನಾತ್ಮಕ ಪ್ರತಿಕ್ರಿಯೆ:-ಅಳು, ಭಯ, ಕೋಪ, ಅಸಹಾಯಕತೆ, ಖಿನ್ನತೆ ಉಂಟಾಗುತ್ತದೆ. ಕೆಲವು ವೇಳೆ ಮೂಕ ವಿಸ್ಮಿತರಾಗುವುದು, ಮುಂತಾದ ಭಾವನಾತ್ಮಕ ಪ್ರತಿಕ್ರಿಯೆಗಳು ಕಂಡುಬರುತ್ತವೆ.

ಸಂಜ್ಞಾನಾತ್ಮಕ ಪ್ರತಿಕ್ರಿಯೆಗಳು:- ಚಿಂತೆ, ಏಕಾಗ್ರತೆ ಇಲ್ಲದಿರುವುದು, ಗಮನ ನೀಡಲಾಗದಿರುವುದು, ಗೊಂದಲ, ನೆನಪಿನ ಶಕ್ತಿ ಕ್ಷೀಣಿಸುವುದು, ಮುಂತಾದವು.

ಸಾಮಾಜಿಕ ಪ್ರತಿಕ್ರಿಯೆಗಳು:- ಇತರರಿಂದ ದೂರ ಸರಿಯುವುದು, ವಾದ-ವಿವಾದ, ಜಗಳ, ಕೂಗಾಟ ಮುಂತಾದವು ಕಂಡುಬರುತ್ತವೆ.

ಇಂತಹ ಪ್ರತಿಕ್ರಿಯೆಗಳು ದೀರ್ಘಕಾಲ ಇರಬಹುದು ಇಲ್ಲವೆ ತಾತ್ಕಾಲಿಕವಾಗಿರಬಹುದು. ಇವುಗಳನ್ನು ಸೂಕ್ತ ಆಪ್ತಸಲಹೆ ಮೂಲಕ ಗುಣ ಪಡಿಸಬಹುದು.

ಹೀಗೆ ಪ್ರಕೃತಿ ವಿಕೋಪಗಳು ಮಾನವನ ವರ್ತನೆಯ ಮೇಲೆ ಗಂಭೀರವಾದ ಪರಿಣಾವನ್ನು ಬೀರುತ್ತವೆ.

ಪರಿಸರ ರಕ್ಷಣೆಗಾಗಿ ತೋರುವ ಎಲ್ಲ ಬಗೆಯ ವರ್ತನೆಗಳನ್ನು ಪರಿಸರ ಪ್ರೇಮಿ ವರ್ತನೆ ಎನ್ನವರು. ಕೆಲವು ಪರಿಸರ ಪ್ರೇಮಿ ವರ್ತನೆಗಳು ಕೆಳಕಂಡಂತಿವೆ.

ವಾಯು ಮಾಲಿನ್ಯವನ್ನು ತಗ್ಗಿಸುವುದು, ಸೈಕಲ್, ಬ್ಯಾಟರಿ ಚಾಲಿತ ವಾಹನ ಓಡಿಸುವುದು, ಸಾರ್ವಜನಿಕ ವಾಹನ ಬಳಸುವುದು. ಮುಂತಾದವು.

ಶಬ್ದಮಾಲಿನ್ಯವನ್ನು ನಿಯಂತ್ರಿಸುವುದು:- ವಾಹನ ಚಾಲನೆ ಮಾಡುವಾಗ ಅನಗತ್ಯವಾಗಿ ಹಾರ್ನ್

ಮಾಡದಿರುವುದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕಗಳ ಬಳಕೆ ಕಡಿಮೆ ಮಾಡುವುದು. ಮುಂತಾದವು.

ತ್ಯಾಜ್ಯವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡುವುದು, ಅಂದರೆ ಒಣಕಸ ಮತ್ತು ಹಸಿಕಸಗಳನ್ನು ಪ್ರತ್ಯೇಕಿಸುವುದು. ಗೊಬ್ಬರವಾಗುವ ಕಸವನ್ನು ಮನೆಯಲ್ಲಿ ಗಿಡಗಳಿಗೆ ಹಾಕಿ ಗೊಬ್ಬರವಾಗುವಂತೆ ಮಾಡುವುದು. ಇತ್ಯಾದಿ.

ಗಿಡನೆಟ್ಟು ಪೋಷಣೆ ಮಾಡುವುದು:- ‘ಮನೆಗೊಂದು ಮರ, ಊರಿಗೊಂದು ಕಾಡು’ ಎಂಬ ಹೇಳಿಕೆಯನ್ನು ಪ್ರಚುರ ಪಡಿಸಬೇಕು.

ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವುದು

ಕೊಳೆಯದ ವಸ್ತುಗಳನ್ನು ಬಳಸದಿರುವುದು. ಮುಂತಾದವು.

ಹೀಗೆ ವಿವಿಧ ಪರಿಸರಪ್ರೇಮಿ ವರ್ತನೆಗಳನ್ನು ರೂಢಿಸಿಕೊಂಡು ಆ ರೀತಿ ನಡೆದರೆ ಎಲ್ಲರಿಗೂ ಹಿತವಾಗುವುದು.

ಮನೋವಿಜ್ಞಾನ ಮತ್ತು ಸಾಮಾಜಿಕ ಕಳಕಳಿ (Psychology and social concerns)

ನಮ್ಮ ಸಮಾಜ ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಬಡತನ ಮತ್ತು ಕ್ರೌರ್ಯ ಅಥವಾ ಹಿಂಸೆ. ಇವು ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತವೆ. ಬಡತನ ಕೇವಲ ಒಂದು ಆರ್ಥಿಕ ಸಮಸ್ಯೆಯಲ್ಲ, ಹಾಗೆಯೇ ಹಿಂಸೆ ಕೇವಲ ಕಾನೂನು ಉಲ್ಲಂಘನೆಯಲ್ಲ, ಇವುಗಳ ಕಾರಣಗಳನ್ನು ಮತ್ತು ಪರಿಣಾಮಗಳನ್ನು ಗುರುತಿಸಲು ಮನೋವಿಜ್ಞಾನಿಗಳು ಯತ್ನಿಸುತ್ತಿದ್ದಾರೆ.

ಸಾಮಾಜಿಕ ಮನೋವಿಜ್ಞಾನದ ಪ್ರಕಾರ ಬಡತನ ಎಂದರೆ “ಸಮಾಜದಲ್ಲಿ ಸಂಪನ್ಮೂಲಗಳ ಅಸಮರ್ಪಕ ಹಂಚಿಕೆಯಿಂದ ಜನರು ಮೂಲ ಸೌಲಭ್ಯಗಳಿಂದ ವಂಚಿತರಾಗುವುದು”, ಮತ್ತೆ ಕೆಲವರ ಪ್ರಕಾರ ಬಡತನ ಎಂದರೆ ಸಾಮಾಜಿಕ ಅನುಕೂಲಗಳಿಂದ ವಂಚಿತರಾಗುವುದು.

ಸಮಾಜದಲ್ಲಿ ಅಸಮಾನತೆ(ಭೇದ-ಭಾವ)ಹಿಂದಿನಿಂದಲೂ ಇದೆ. ಉಳ್ಳವರು ಹೆಚ್ಚಿನ ಸೌಲಭ್ಯಗಳನ್ನು ಅನುಭವಿಸುತ್ತಾರೆ. ಇಲ್ಲದವರು ಈ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ದಿನದಿಂದ ದಿನಕ್ಕೆ ಈ ವರ್ಗಭೇದ(ಅಸಮಾನತೆ) ಹೆಚ್ಚುತ್ತಲೇ ಇದೆ.

Leave a Comment