Goals of studying psychology: ಮನೋವಿಜ್ಞಾನದ ಅಧ್ಯಯನದ ಗುರಿಗಳು(Goals of studying psychology).

Goals of studying psychology: ಯಾವುದೇ ವೈಜ್ಞಾನಿಕ ಅಧ್ಯಯನ ವಿಧಾನದಂತೆ ಮನೋವಿಜ್ಞಾನ ಕೂಡ ಕೆಳಕಂಡ ಗುರಿಗಳನ್ನು ಹೊಂದಿದೆ. ಅವುಗಳೆಂದರೆ ವರ್ತನೆಯ ವರ್ಣನೆ, ಮುನ್ನರಿವು, ವಿವರಣೆ, ನಿಯಂತ್ರಣ ಮತ್ತು ಅಧ್ಯಯನದಿಂದ ಪಡೆದ ಜ್ಞಾನವನ್ನು ವಸ್ತುನಿಷ್ಠ ರೀತಿಯಲ್ಲಿ ಸಮಸ್ಯೆ ನಿವಾರಣೆಗೆ ಅನ್ವಯಗೊಳಿಸುವುದು. ಮೇಲ್ಕಂಡ ಪದಗಳ ಅರ್ಥವಿವರಣೆ ನೋಡೋಣ.
ವರ್ಣನೆ : ಮನೋವಿಜ್ಞಾನ ಅಧ್ಯಯನದಲ್ಲಿ ವರ್ತನೆಯನ್ನು ಅಥವಾ ವಿದ್ಯಮಾನವನ್ನು ಸಾಧ್ಯವಾದಷ್ಟು ನಿಖರವಾಗಿ ಅಧ್ಯಯನ ಮಾಡಲು ಪ್ರಯತ್ನಿಸಲಾಗಿದೆ. ಇದರಿಂದ ಒಂದು ನಿರ್ದಿಷ್ಟ ವರ್ತನೆಯನ್ನು ಇತರ ವರ್ತನೆಗಳಿಂದ ಪ್ರತ್ಯೇಕಿಸಲು ಸಹಾಯವಾಗುತ್ತದೆ. ಉದಾಹರಣೆಗೆ : ಅಧ್ಯಯನ ಮಾಡುವ ವ್ಯಕ್ತಿಯು ವಿದ್ಯಾರ್ಥಿಗಳ ಕಲಿಕಾ ಅಭ್ಯಾಸವನ್ನು ಅಧ್ಯಯನ ಮಾಡಲು ಒಲವು ತೋರುತ್ತಾನೆ. ಕಲಿಕಾ ಅಭ್ಯಾಸವು ವಿವಿಧ ರೀತಿಯ ವರ್ತನೆಗಳನ್ನು ಒಳಗೊಂಡಿರುತ್ತದೆ. ಅವುಗಳೆಂದರೆ, ನಿಯಮಿತವಾಗಿ ತರಗತಿಗೆ ಹಾಜರಾಗುವುದು. ಮನೆಗೆ ಬರೆದುಕೊಂಡುಬರಲು ನೀಡಿರುವ ಕೆಲಸವನ್ನು ನಿಗದಿತ ಸಮಯಕ್ಕೆ ತಂದೊಪ್ಪಿಸುವುದು, ಕಲಿಕೆಗೆ ವೇಳಾಪಟ್ಟಿಯನ್ನು ರೂಪಿಸುವುದು ಮತ್ತು ಅದನ್ನು ಚಾಚೂತಪ್ಪದೆ ಪಾಲಿಸುವುದು, ಓದಿದ್ದನ್ನು ಪ್ರತಿದಿನ ಪುನರಾವೃತ್ತಿ ಮಾಡುವುದು. ಇತ್ಯಾದಿ.
ಮುನ್ನರಿವು : ಮನೋವೈಜ್ಞಾನಿಕ ಅಧ್ಯಯನದ ಎರಡನೆಯ ಗುರಿ ಎಂದರೆ ವರ್ತನೆಯ ಮುನ್ನರಿವು. ಉದಾಹರಣೆಗೆ: ಕಲಿಕಾ ಅಭ್ಯಾಸದ ಅಧ್ಯಯನದಲ್ಲಿ ಅಧ್ಯಯನ ಮಾಡುವ ವ್ಯಕ್ತಿಯು ವಿವಿಧ ವಿಷಯಗಳಲ್ಲಿ ಆಗಿರುವ ಪ್ರಗತಿಗೂ ಮತ್ತು ಕಲಿಕೆಗೆ ನಿಗದಿಗೊಳಿಸಿರುವ ಸಮಯಕ್ಕೂ ನಡುವೆ ಸಂಬಂಧ ಸ್ಥಾಪಿಸುವುದು. ನಂತರ ವಿದ್ಯಾರ್ಥಿ ಕಲಿಕೆಗಾಗಿ ಹೆಚ್ಚು ಸಮಯ ನಿಗದಿ ಮಾಡಿಕೊಂಡಿದ್ದರೆ, ಆತ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಾನೆ ಎಂದು ಊಹಿಸ(ಮುನ್ನರಿವು)ಬಹುದು.
ವಿವರಣೆ : ಮನೋವೈಜ್ಞಾನಿಕ ಅಧ್ಯಯನದ ಮೂರನೆ ಗುರಿ ಎಂದರೆ, ವರ್ತನೆಯ ಕಾರಣಗಳನ್ನು ನಿರ್ಧರಿಸುವುದು. ಮನೋವಿಜ್ಞಾನಿಗಳು ವರ್ತನೆಯ ಕಾರಣಗಳನ್ನು ತಿಳಿಯಲು ಆದ್ಯತೆ ನೀಡುತ್ತಾರೆ. ಹಾಗೆಯೇ ಒಂದು ನಿರ್ದಿಷ್ಟ ವರ್ತನೆ ಯಾವ ಸಂದರ್ಭಗಳಲ್ಲಿ ಕಂಡುಬರುವುದಿಲ್ಲ ಎಂಬುದನ್ನು ತಿಳಿಯಲು ಯತ್ನಿಸುತ್ತಾರೆ. ಉದಾ: ಕೆಲವು ವಿದ್ಯಾರ್ಥಿಗಳು ತರಗತಿಯಲ್ಲಿ ಹೆಚ್ಚು ಗಮನ ನೀಡಲು ಕಾರಣ ಏನು? ಕೆಲವು ವಿದ್ಯಾರ್ಥಿಗಳು ಕಲಿಕೆಗೆ ಅತಿ ಕಡಿಮೆ ವೇಳೆ ನಿಗದಿಗೊಳಿಸಲು ಕಾರಣ ಏನು? ಆದ್ದರಿಂದ ವಿವರಣೆಯ ಉದ್ದೇಶ ವರ್ತನೆಯ ಕಾರಣಗಳನ್ನು ನಿರ್ಧರಿಸುವುದಾಗಿರುತ್ತದೆ.
ನಿಯಂತ್ರಣ : ನಿಯಂತ್ರಣ ಮೂರು ಅಂಶಗಳಿಗೆ ಅನ್ವಯಿಸುತ್ತದೆ. ಒಂದು ನಿರ್ದಿಷ್ಟ ವರ್ತನೆಯನ್ನು ಹೆಚ್ಚು ಮಾಡುವುದು ಇಲ್ಲವೆ ಕಡಿಮೆ ಮಾಡುವುದು. ಉದಾ: ಅಧ್ಯಯನಕ್ಕೆ ನಿಗದಿ ಮಾಡಿರುವ ಸಮಯವನ್ನು ಹೆಚ್ಚು ಮಾಡುವುದು. ಇಲ್ಲವೆ ಕಡಿಮೆ ಮಾಡುವುದು ಅಥವಾ ಅಷ್ಟೇ ಇರುವಂತೆ ನೋಡಿಕೊಳ್ಳುವುದು. ನಿಯಂತ್ರಣದ ಮತ್ತೊಂದು ಉದಾಹರಣೆ ಎಂದರೆ ಮನೋಚಿಕಿತ್ಸೆ ಮೂಲಕ ಮನೋರೋಗಿಯ ಆರೋಗ್ಯದಲ್ಲಿ (ನಡತೆಯಲ್ಲಿ) ಒಳ್ಳೆಯ ಬದಲಾವಣೆ ಉಂಟುಮಾಡುವುದು.
ಅನ್ವಯ : ವೈಜ್ಞಾನಿಕ ಅಧ್ಯಯನದ ಕೊನೆಯ ಗುರಿ ಎಂದರೆ, ಜನರ ಬದುಕಿನಲ್ಲಿ ಉತ್ತಮ ಬದಲಾವಣೆ ಉಂಟುಮಾಡುವುದು. ಜನರ ಬದುಕಿನ ಗುಣಮಟ್ಟ ಸುಧಾರಣೆ ಮನೋವೈಜ್ಞಾನಿಕ ಅಧ್ಯಯನದ ಪ್ರಮುಖ ಗುರಿಯಾಗಿದೆ. ಉದಾಹರಣೆಗೆ : ಧ್ಯಾನ, ಯೋಗಾಭ್ಯಾಸ ಇತ್ಯಾದಿಗಳ ಬಳಕೆ, ಒತ್ತಡ ಕಡಿಮೆ ಮಾಡಲು ಮತ್ತು ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗಿದೆ. ವೈಜ್ಞಾನಿಕ ಅಧ್ಯಯನದ ಇತರ ಉದ್ದೇಶಗಳೆಂದರೆ ನೂತನ ಸಿದ್ದಾಂತಗಳನ್ನು ಹಾಗೂ ತತ್ವಗಳನ್ನು ರೂಪಿಸುವುದು. ಇದರಿಂದ ಹೆಚ್ಚಿನ ಅಧ್ಯಯನಕ್ಕೆ ಅನುಕೂಲವಾಗುವುದು.
ವೈಜ್ಞಾನಿಕ ಅಧ್ಯಯನದ ಹಂತಗಳು :
ವಿಜ್ಞಾನ ಹೇಗೆ ಅಧ್ಯಯನ ಮಾಡುತ್ತದೆ ಎಂಬುದು ವಿಜ್ಞಾನವನ್ನು ನಿರೂಪಿಸುತ್ತದೆ. ವೈಜ್ಞಾನಿಕ ವಿಧಾನವು ಒಂದು ನಿರ್ದಿಷ್ಟ ವರ್ತನೆಯನ್ನು ಅಥವಾ ವಿದ್ಯಮಾನವನ್ನು ನಿಷ್ಪಕ್ಷಪಾತವಾಗಿ (ವಸ್ತುನಿಷ್ಠ), ವ್ಯವಸ್ಥಿತವಾಗಿ ಮತ್ತು ಪರೀಕ್ಷಿಸಬಹುದಾದ ರೀತಿಯಲ್ಲಿ ಅಧ್ಯಯನ ಮಾಡುತ್ತದೆ. ವಸ್ತುನಿಷ್ಟತೆ ಎಂದರೆ, ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಕ್ತಿಗಳು ಒಂದೇ ವಿಷಯದ ಬಗ್ಗೆ ಸ್ವತಂತ್ರವಾಗಿ ಏಕಕಾಲದಲ್ಲಿ ನಡೆಸಿದ ಅಧ್ಯಯನದ ಅಂತಿಮ ಫಲಿತಾಂಶ ಒಂದೇ ಆಗಿರುತ್ತದೆ.
ವೈಜ್ಞಾನಿಕ ಅಧ್ಯಯನದ ಎರಡನೆಯ ಲಕ್ಷಣ ಎಂದರೆ ಅಧ್ಯಯನದಲ್ಲಿ ವ್ಯವಸ್ಥಿತ ಕ್ರಮವನ್ನು ಅನುಸರಿಸುವುದು.
ಆ ಹಂತಗಳೆಂದರೆ ಅಧ್ಯಯನ ಸಮಸ್ಯೆಯ ಆಯ್ಕೆ, ಅರ್ಥವಿವರಣೆ, ಮಾಹಿತಿ ಸಂಗ್ರಹಣೆ, ಸಾರಾಂಶ ನಿರ್ಧಾರ ಮತ್ತು ಅಧ್ಯಯನ ಸಾರಾಂಶ ಮತ್ತು ಸಿದ್ಧಾಂತವನ್ನು ಪರಿಷ್ಕರಿಸುವುದು.
ಮನೋವಿಜ್ಞಾನ ಅಧ್ಯಯನ ವಿಧಾನಗಳು (Methods of Psychology)
ಕೆಲವು ಅಧ್ಯಯನ ವಿಧಾನಗಳು:
ಮೊದಲನೆ ಅಧ್ಯಾಯದಲ್ಲಿ ಮನೋವಿಜ್ಞಾನದ ಅಧ್ಯಯನ ವಸ್ತು ಏನು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಮನೋವಿಜ್ಞಾನ ಮುಖ್ಯವಾಗಿ ವ್ಯಕ್ತಿಯ ವರ್ತನೆಯನ್ನು ಮತ್ತು ಮಾನಸಿಕ ಪ್ರಕ್ರಿಯೆಗಳನ್ನು ಕುರಿತು ಅಧ್ಯಯನ ಮಾಡುತ್ತದೆ. ಈ ವಿದ್ಯಮಾನಗಳನ್ನು ಮನೋವಿಜ್ಞಾನಿಗಳು ಹೇಗೆ ಅಧ್ಯಯನ ಮಾಡುತ್ತಾರೆ ಎಂಬ ಬಗ್ಗೆ ತಿಳಿದುಕೊಳ್ಳೋಣ. ಎಲ್ಲ ವಿಜ್ಞಾನಿಗಳಂತೆ ಮನೋವಿಜ್ಞಾನಿಗಳೂ ಕೂಡ ಅಧ್ಯಯನ ವಿಷಯದ ವಿವರಣೆ. ವರ್ಣನೆ. ಊಹೆ ಹಾಗೂ ನಿಯಂತ್ರಣಕ್ಕೆ ಒತ್ತು ನೀಡುವರು. ಇದಕ್ಕಾಗಿ ಮನೋವಿಜ್ಞಾನಿಗಳು ವ್ಯವಸ್ಥಿತವಾದ ಅವಲೋಕನಕ್ಕೆ ಹೆಚ್ಚು ಆದ್ಯತೆ ನೀಡುವರು. ಅಧ್ಯಯನ ಕ್ರಮವು ಮನೋವಿಜ್ಞಾನವನ್ನು ಒಂದು ವಿಜ್ಞಾನವಾಗಿ ಪರಿಗಣಿಸುವಂತೆ ಮಾಡಿವೆ. ಮಾನವನ ವರ್ತನೆಯ ಅಧ್ಯಯನ ತುಂಬಾ ಸಂಕೀರ್ಣವಾದುದರಿಂದ ಮನೋವಿಜ್ಞಾನಿಗಳು ವರ್ತನೆಯ ಅಧ್ಯಯನಕ್ಕೆ ವಿವಿಧ ವಿಧಾನಗಳನ್ನು ಅವಲಂಬಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಅವಲೋಕನ ವಿಧಾನ. ಅಂತರಾವಲೋಕನ ವಿಧಾನ. ಸಮೀಕ್ಷಾ ವಿಧಾನ, ವ್ಯಕ್ತಿ ವೃತ್ತಾಂತ ವಿಧಾನ, ಪ್ರಾಯೋಗಿಕ ವಿಧಾನ. ಮುಂತಾದವು.
ಈ ಅಧ್ಯಾಯದಲ್ಲಿ ಮನೋವಿಜ್ಞಾನಿಗಳು ಅಧ್ಯಯನಕ್ಕಾಗಿ ಅವಲಂಬಿಸಿರುವ ವಿಧಾನಗಳ ಬಗ್ಗೆ ಹಾಗೂ ಅವುಗಳ ಇತಿ ಮಿತಿಗಳ ಬಗ್ಗೆ ತಿಳಿದುಕೊಳ್ಳುವಿರಿ.
1. ಅವಲೋಕನ ವಿಧಾನ (Observation Method):
ಅವಲೋಕನ ವಿಧಾನ ಒಂದು ಪ್ರಮುಖ ವಿಧಾನ. ವರ್ತನೆಯನ್ನು ಅಧ್ಯಯನ ಮಾಡಲು ಇದೊಂದು ಪರಿಣಾಮಕಾರಿ ವಿಧಾನ ಎನಿಸಿದೆ. ದೈನಂದಿನ ಬದುಕಿನಲ್ಲಿ ಅನೇಕ ವಿದ್ಯಮಾನಗಳನ್ನು ನೋಡುತ್ತೇವೆ. ಆದರೆ ಅವುಗಳ ಕಡೆ ಹೆಚ್ಚು ಗಮನ ನೀಡುವುದಿಲ್ಲ. ಅಂದರೆ ಉದ್ದೇಶಪೂರ್ವಕವಾಗಿ ಗಮನಿಸುವುದಿಲ್ಲ. ಒಬ್ಬ ವ್ಯಕ್ತಿಯ ವರ್ತನೆಯನ್ನು ಉದ್ದೇಶಪೂರ್ವಕವಾಗಿ ಗಮನಿಸಿದಾಗ ನಮಗೆ ಅನೇಕ ಕುತೂಹಲಕಾರಿ ಮಾಹಿತಿಗಳು ದೊರೆಯುತ್ತವೆ. ವೈಜ್ಞಾನಿಕ ದೃಷ್ಟಿಯಿಂದ ಅವಲೋಕನ ಮಾಡುವುದಕ್ಕೂ ದಿನನಿತ್ಯ ನೋಡುವುದಕ್ಕೂ ಅನೇಕ ವ್ಯತ್ಯಾಸಗಳಿವೆ. ಅವುಗಳೆಂದರೆ.
1. ಅವಲೋಕನ ವಿಧಾನ
2. ಅಂತರಾವಲೋಕನ ವಿಧಾನ
3. ಸಮೀಕ್ಷಾ ವಿಧಾನ (ಕ್ಷೇತ್ರ ಶೋಧನೆ ವಿಧಾನ)
4. ವ್ಯಕ್ತಿ ವೃತ್ತಾಂತ ವಿಧಾನ
5. ಪ್ರಾಯೋಗಿಕ ವಿಧಾನ
(ಪ್ರತಿಯೊಂದು ವಿಧಾನದ ಇತಿಮಿತಿಗಳು ಅಥವಾ ಸಾಧಕ-ಬಾಧಕಗಳು)
ಮೊದಲನೆ ಅಧ್ಯಾಯದಲ್ಲಿ ಮನೋವಿಜ್ಞಾನದ ಅಧ್ಯಯನ ವಸ್ತು ಏನು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಮನೋವಿಜ್ಞಾನ ಮುಖ್ಯವಾಗಿ ವ್ಯಕ್ತಿಯ ವರ್ತನೆಯನ್ನು ಮತ್ತು ಮಾನಸಿಕ ಪ್ರಕ್ರಿಯೆಗಳನ್ನು ಕುರಿತು ಅಧ್ಯಯನ ಮಾಡುತ್ತದೆ. ಈ ವಿದ್ಯಮಾನಗಳನ್ನು ಮನೋವಿಜ್ಞಾನಿಗಳು ಹೇಗೆ ಅಧ್ಯಯನ ಮಾಡುತ್ತಾರೆ ಎಂಬ ಬಗ್ಗೆ ತಿಳಿದುಕೊಳ್ಳೋಣ. ಎಲ್ಲ ವಿಜ್ಞಾನಿಗಳಂತೆ ಮನೋವಿಜ್ಞಾನಿಗಳೂ ಕೂಡ ಅಧ್ಯಯನ ವಿಷಯದ ವಿವರಣೆ. ವರ್ಣನೆ. ಊಹೆ ಹಾಗೂ ನಿಯಂತ್ರಣಕ್ಕೆ ಒತ್ತು ನೀಡುವರು. ಇದಕ್ಕಾಗಿ ಮನೋವಿಜ್ಞಾನಿಗಳು ವ್ಯವಸ್ಥಿತವಾದ ಅವಲೋಕನಕ್ಕೆ ಹೆಚ್ಚು ಆದ್ಯತೆ ನೀಡುವರು. ಅಧ್ಯಯನ ಕ್ರಮವು ಮನೋವಿಜ್ಞಾನವನ್ನು ಒಂದು ವಿಜ್ಞಾನವಾಗಿ ಪರಿಗಣಿಸುವಂತೆ ಮಾಡಿವೆ. ಮಾನವನ ವರ್ತನೆಯ ಅಧ್ಯಯನ ತುಂಬಾ ಸಂಕೀರ್ಣವಾದುದರಿಂದ ಮನೋವಿಜ್ಞಾನಿಗಳು ವರ್ತನೆಯ ಅಧ್ಯಯನಕ್ಕೆ ವಿವಿಧ ವಿಧಾನಗಳನ್ನು ಅವಲಂಬಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಅವಲೋಕನ ವಿಧಾನ. ಅಂತರಾವಲೋಕನ ವಿಧಾನ. ಸಮೀಕ್ಷಾ ವಿಧಾನ, ವ್ಯಕ್ತಿ ವೃತ್ತಾಂತ ವಿಧಾನ, ಪ್ರಾಯೋಗಿಕ ವಿಧಾನ. ಮುಂತಾದವು.
ಈ ಅಧ್ಯಾಯದಲ್ಲಿ ಮನೋವಿಜ್ಞಾನಿಗಳು ಅಧ್ಯಯನಕ್ಕಾಗಿ ಅವಲಂಬಿಸಿರುವ ವಿಧಾನಗಳ ಬಗ್ಗೆ ಹಾಗೂ ಅವುಗಳ ಇತಿ ಮಿತಿಗಳ ಬಗ್ಗೆ ತಿಳಿದುಕೊಳ್ಳುವಿರಿ.
1. ಅವಲೋಕನ ವಿಧಾನ (Observation Method):
ಅವಲೋಕನ ವಿಧಾನ ಒಂದು ಪ್ರಮುಖ ವಿಧಾನ. ವರ್ತನೆಯನ್ನು ಅಧ್ಯಯನ ಮಾಡಲು ಇದೊಂದು ಪರಿಣಾಮಕಾರಿ ವಿಧಾನ ಎನಿಸಿದೆ. ದೈನಂದಿನ ಬದುಕಿನಲ್ಲಿ ಅನೇಕ ವಿದ್ಯಮಾನಗಳನ್ನು ನೋಡುತ್ತೇವೆ. ಆದರೆ ಅವುಗಳ ಕಡೆ ಹೆಚ್ಚು ಗಮನ ನೀಡುವುದಿಲ್ಲ. ಅಂದರೆ ಉದ್ದೇಶಪೂರ್ವಕವಾಗಿ ಗಮನಿಸುವುದಿಲ್ಲ. ಒಬ್ಬ ವ್ಯಕ್ತಿಯ ವರ್ತನೆಯನ್ನು ಉದ್ದೇಶಪೂರ್ವಕವಾಗಿ ಗಮನಿಸಿದಾಗ ನಮಗೆ ಅನೇಕ ಕುತೂಹಲಕಾರಿ ಮಾಹಿತಿಗಳು ದೊರೆಯುತ್ತವೆ. ವೈಜ್ಞಾನಿಕ ದೃಷ್ಟಿಯಿಂದ ಅವಲೋಕನ ಮಾಡುವುದಕ್ಕೂ ದಿನನಿತ್ಯ ನೋಡುವುದಕ್ಕೂ ಅನೇಕ ವ್ಯತ್ಯಾಸಗಳಿವೆ. ಅವುಗಳೆಂದರೆ.
1 ಆಯ್ಕೆ : ವೈಜ್ಞಾನಿಕ ಅವಲೋಕನದಲ್ಲಿ ಆಯ್ಕೆಯನ್ನು ಕಾಣುತ್ತೇವೆ. ಅಂದರೆ ಎಲ್ಲಾ ವರ್ತನೆಗಳನ್ನೂ ಗಮನಿಸುವುದಿಲ್ಲ. ಬದಲಾಗಿ ನಿರ್ದಿಷ್ಟ ವರ್ತನೆಯನ್ನು ಗಮನಿಸುತ್ತೇವೆ.
11 . ಮಾಹಿತಿಯನ್ನು ದಾಖಲಿಸುವುದು : ಅವಲೋಕನ ಮಾಡುವಾಗ ಅವಲೋಕನಕಾರನು ಅಗತ್ಯವಿರುವ
ವಿವರಗಳನ್ನು ದಾಖಲಿಸುವನು. ದಾಖಲಿಸುವುದಕ್ಕಾಗಿ ವಿವಿಧ ಸಾಧನಗಳನ್ನು ಬಳಸುವನು. ಉದಾಹರಣೆಗೆ: ಟಿಪ್ಪಣಿ ಬರೆಯುವುದು. ಛಾಯಾಚಿತ್ರ ತೆಗೆಯುವುದು, ಧ್ವನಿ ಮುದ್ರಿಸಿಕೊಳ್ಳುವುದು, ವಿಡಿಯೋ ಮಾಡುವುದು ಇತ್ಯಾದಿ.
iii. ದತ್ತಾಂಶದ ವಿಶ್ಲೇಷಣೆ ಮಾಡುವುದು.
ಅವಲೋಕನದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಣೆ ಮಾಡಿ ವರ್ತನೆಯ ಕಾರ್ಯ ಕಾರಣ ಸಂಬಂಧವನ್ನು ಅಧ್ಯಯನ ಮಾಡಲಾಗುವುದು. ಉತ್ತಮ ಅವಲೋಕನ ಮಾಡಲು ವಿಶೇಷ ಪರಿಣಿತಿ, ಜ್ಞಾನ ಹಾಗೂ ಕೌಶಲ ಇರಬೇಕು. ಒಬ್ಬ ಉತ್ತಮ ಅವಲೋಕನಕಾರನಿಗೆ ಏನನ್ನು ಅವಲೋಕನ ಮಾಡಬೇಕು ಎಲ್ಲಿ ಅವಲೋಕನ ಮಾಡಬೇಕು, ಹೇಗೆ ಅವಲೋಕನ ಮಾಡಬೇಕು ಹಾಗೂ ಅವಲೋಕನದ
ಮಾಹಿತಿಯನ್ನು ಹೇಗೆ ಸಂಗ್ರಹಿಸಬೇಕು ಎಂಬ ಬಗ್ಗೆ ತಿಳಿದಿರುತ್ತದೆ.
ಅವಲೋಕನದ ವಿಧಗಳು :
ಅವಲೋಕನ ವಿಧಾನದಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಅವುಗಳೆಂದರೆ,
ಅ) ಸ್ವಾಭಾವಿಕ ಮತ್ತು ನಿಯಂತ್ರಿತ ಅವಲೋಕನ :-
ವ್ಯಕ್ತಿಯ ವರ್ತನೆಯನ್ನು ಸ್ವಾಭಾವಿಕ ಸನ್ನಿವೇಶದಲ್ಲಿ ವ್ಯಕ್ತಿಯ ಅರಿವಿಗೆ ಬಾರದಂತೆ ಅವಲೋಕನ ಮಾಡುವುದಕ್ಕೆ ಸ್ವಾಭಾವಿಕ ಅಥವಾ ವಾಸ್ತವಿಕ ಅವಲೋಕನ ಎನ್ನುತ್ತೇವೆ. ಇಂತಹ ಅವಲೋಕನವನ್ನು ಶಾಲೆ, ಮನೆ ಮುಂತಾದ ಸ್ವಾಭಾವಿಕ ಸನ್ನಿವೇಶಗಳಲ್ಲಿ
ಮಾಡಲಾಗುವುದು, ನಿಯಂತ್ರಿತ ಅವಲೋಕನದಲ್ಲಿ ಪ್ರಾಯೋಗಿಕ ಸನ್ನಿವೇಶದಲ್ಲಿ ಒಂದು ನಿರ್ದಿಷ್ಟ ವರ್ತನೆಯನ್ನು ಅವಲೋಕನ ಮಾಡಲಾಗುವುದು.
ಉದಾಹರಣೆಗೆ: ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಕೊಠಡಿ ಮೇಲ್ವಿಚಾರಕರಿರುವಾಗ ಹೇಗೆ ವರ್ತಿಸುತ್ತಾರೆ ಮತ್ತು ಐದು ನಿಮಿಷಗಳ ಕಾಲ ಮೇಲ್ವಿಚಾರಕರು ಇಲ್ಲದಿರುವಾಗ ಹೇಗೆ ವರ್ತಿಸುತ್ತಾರೆ ಎಂಬುದರ ಅವಲೋಕನ ಮಾಡುವುದು.
ಆ) ಗುಂಪಿನ ಜೊತೆ ಭಾಗವಹಿಸಿ ಅವಲೋಕನ ಮಾಡುವುದು ಮತ್ತು ಗುಂಪಿನ ಜೊತೆ ಭಾಗವಹಿಸದೆ ಅವಲೋಕನ ಮಾಡುವುದು.
▪️ಗುಂಪಿನಲ್ಲಿ ಒಬ್ಬನಾಗಿ ನಿರ್ದಿಷ್ಟ ವ್ಯಕ್ತಿಯ ವರ್ತನೆಯನ್ನು ವ್ಯಕ್ತಿಗೆ ಅರಿವಿಲ್ಲದಂತೆ ಅವಲೋಕನ ಮಾಡುವುದೇ
▪️ಗುಂಪಿನ ಜೊತೆ ಸೇರಿ ಅವಲೋಕನ ಮಾಡುವುದು ಎನ್ನುತ್ತೇವೆ. ಗುಂಪಿನಲ್ಲಿರುವ ನಿರ್ದಿಷ್ಟ ವ್ಯಕ್ತಿಯ ವರ್ತನೆಯನ್ನು ನೋಡಿ ವರ್ತನೆಯ ಕಾರ್ಯ-ಕಾರಣ ಸಂಬಂಧವನ್ನು ಅರ್ಥಮಾಡಿಕೊಳ್ಳಬಹುದು.
▪️ದೂರದಿಂದಲೇ ಅವನ ಅರಿವಿಗೆ ಬಾರದಂತೆ ಅವಲೋಕನ ಮಾಡುವುದು ಮತ್ತೊಂದು ವಿಧಾನ. ಗುಂಪಿನ ಜೊತೆ ಭಾಗವಹಿಸದೆ ಮಾಡುವ ಅವಲೋಕನದಲ್ಲಿ ವಿಡಿಯೋ ಕ್ಯಾಮರ ಬಳಸುವುದು. ನಂತರ ವಿಡಿಯೋ
ಅವಲೋಕನ ವಿಧಾನವು ತನ್ನದೇ ಆದ ಇತಿಮಿತಿಗಳನ್ನು ಹೊಂದಿದೆ.
1.ಅಧ್ಯಯನ ಮಾಡಬೇಕಾದ ವರ್ತನೆ ಕಾಣಿಸಿಕೊಳ್ಳುವವರೆಗೂ ಅವಲೋಕನಕಾರ ಗಮನವಿಟ್ಟು ಕಾಯಬೇಕು. ಸ್ವಲ್ಪ ಗಮನ ಆಕಡೆ ಈಕಡೆ ಹೋದರೂ ವರ್ತನೆಯ ಪೂರ್ಣ ವಿವರಗಳನ್ನು ಗಮನಿಸಲು ಆಗುವುದಿಲ್ಲ.
2. ವರ್ತನೆಯ ವಿವರಗಳನ್ನು ದಾಖಲು ಮಾಡಿಕೊಳ್ಳುವಾಗ ಎಷ್ಟೇ ಎಚ್ಚರ ವಹಿಸಿದರೂ ಅನೇಕ ವಿವರಗಳನ್ನು ದಾಖಲಿಸಲು ವಿಫಲರಾಗುತ್ತೇವೆ.
3. ಅವಲೋಕನಕಾರನು ಎಷ್ಟೇ ನಿಷ್ಪಕ್ಷಪಾತವಾಗಿದ್ದರೂ ಆತನ ಸ್ವಂತ ಅಭಿಪ್ರಾಯ ಆತನಿಗೆ ಅರಿವಿಲ್ಲದಂತೆ ಸಂಗ್ರಹಿಸಿದ ಮಾಹಿತಿಯಲ್ಲಿ ಸೇರುತ್ತದೆ.
4. ಅವಲೋಕನಕಾರನಿಗೆ ಒಳ್ಳೆಯ ಅನುಭವ ಮತ್ತು ಜ್ಞಾನ ಇರಬೇಕು. ಇಲ್ಲದಿದ್ದರೆ ಅವಲೋಕನದ ಉದ್ದೇಶ ವಿಫಲವಾಗುತ್ತದೆ.
5. ಏನೆಲ್ಲಾ ದೋಷಗಳಿದ್ದರೂ ಇದೊಂದು ಉಪಯುಕ್ತವಾದ. ಯಾವಾಗ ಬೇಕಾದರೂ ಅನುಸರಿಸಬಹುದಾದ, ಹೆಚ್ಚು ಖರ್ಚಿಲ್ಲದ ವಿಧಾನವಾಗಿದೆ ಮತ್ತು ಮನೋವಿಜ್ಞಾನದಲ್ಲಿ ಹೆಚ್ಚು ಬಳಕೆಯಲ್ಲಿದೆ.
2. ಅಂತರಾವಲೋಕನ ವಿಧಾನ (Introspection Method):
ಅಂತರಾವಲೋಕನ ವಿಧಾನವನ್ನು ಬಳಕೆಗೆ ತಂದವನು ಇ.ಬಿ.ಟಿಚನರ್ (ಎಡ್ವರ್ಡ್ ಬ್ರಾಡ್ ಫೋರ್ಡ್ ಟಿಚನರ್). ಟಿಚನರ್ ಪ್ರಕಾರ ಮನುಷ್ಯನನ್ನು ಅರ್ಥಮಾಡಿಕೊಳ್ಳಬೇಕಾದರೆ ಅವನ ಮನಸ್ಸಿನ ಅಂತರಾಳವನ್ನು ಅಧ್ಯಯನ ಮಾಡಬೇಕು. ಮನಸ್ಸನ್ನು ಅಧ್ಯಯನ ಮಾಡಲು ಅಂತರಾವಲೋಕನ ವಿಧಾನ ಒಂದು ಉತ್ತಮವಾದ ವಿಧಾನ. ಆಂತರಿಕ ಅನುಭವ ಅನಿಸಿಕೆಗಳನ್ನು ಅನುಭವವಾಗುತ್ತಿರುವಾಗಲೇ ಒಳಹೊಕ್ಕು ನೋಡಿ ಇದ್ದದ್ದನ್ನು ಇದ್ದ ಹಾಗೆಯೇ ವರದಿ ಮಾಡುವುದು. ಈ ವಿಧಾನದ ವಿಶೇಷ ಗುಣ. ವ್ಯಕ್ತಿ ಒಂದು ನಿರ್ಧಿಷ್ಟ ಸಂಧರ್ಭದಲ್ಲಿ ಪ್ರಚೋದನೆಗೆ ಒಳಗಾದಾಗ ಅಂತರ್ಯದಲ್ಲಿ ಆಗುತ್ತಿರುವ ಅನುಭವಗಳನ್ನು ವರದಿ ಮಾಡಬೇಕು. ಅಂತರಾವಲೋಕನ ಮಾಡಿ ಹೇಗೆ ವರದಿ ಮಾಡಬೇಕು ಎಂಬ ಬಗ್ಗೆ ತರಬೇತಿ ನೀಡಲಾಗುತ್ತದೆ. ಅಂತರಾವಲೋಕನ ಮಾಡಿ ನೀಡಿದ ವರದಿಯನ್ನು ವಿಶ್ಲೇಷಣೆ ಮಾಡಿ ವ್ಯಕ್ತಿಯ ವರ್ತನೆಯನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಅಂತರಾವಲೋಕನ ವರದಿಯು ವಿವರಣೆಯ ರೂಪದಲ್ಲಿರಬಹುದು ಅಥವಾ ಪ್ರಶೋತ್ತರ ರೂಪದಲ್ಲಿರಬಹುದು ಅಥವಾ ಧರೀಕರಣ ರೂಪದಲ್ಲಿ ಇರಬಹುದು.
▪️ಅನುಭವ ಆಗುತ್ತಿರುವಾಗಲೇ ಅಂತರಾವಲೋಕನ ಮಾಡುವುದರಿಂದ ಮನಸ್ಸಿನ ಒಳಹೊಕ್ಕು ನೋಡುವಾಗ ಅನುಭವ ನಿಂತು ಹೋಗುತ್ತದೆ. ಆಗ ನೀಡುವ ವರದಿಯು ಈಗಾಗಲೇ ಆಗಿ ಹೋಗಿರುವ ಅನುಭವದ ವಿವರವಾಗಿರುತ್ತದೆ. ಆದ್ದರಿಂದ ಅಂತರಾವಲೋಕನ ವಿಧಾನ ಎನ್ನುವ ಬದಲು ಇದು ‘ಸಿಂಹಾವಲೋಕನ’ ಎಂದಿದ್ದರೆ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು. ಅಂತರಾವಲೋಕನ ವಿಧಾನದ ಪರಿಣಾಮಕಾರಿ ಉಪಯೋಗ ಈ ವಿಧಾನವನ್ನು ಅನುಸರಿಸಿ ವರದಿ ನೀಡುವ ವ್ಯಕ್ತಿಯ ಅನುಭವ, ತರಬೇತಿ ಹಾಗೂ ಭಾಷೆ ಅಭಿವ್ಯಕ್ತಿ ಸಾಮರ್ಥ್ಯವನ್ನು ಹೆಚ್ಚು ಅವಲಂಬಿಸಿದೆ.
ಅಂತರಾವಲೋಕನ ವಿಧಾನದ ಇತಿಮಿತಿಗಳು
1. ಅಂತರಾಳದ ಅನುಭವಗಳನ್ನು ಯಥಾವತ್ತಾಗಿ ವರದಿ ಮಾಡುವುದು ತುಂಬಾ ಕಷ್ಟ.
2. ಭಾಷೆ ಅಭಿವ್ಯಕ್ತಿ ತಿಳಿಯದವರು, ಬುದ್ದಿಮಾಂದ್ಯರು, ಮುಂತಾದವರನ್ನು ಅಧ್ಯಯನ ಮಾಡುವುದು ಕಷ್ಟ.
3. ಅಂತರಾಲೋಕನ ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಆಗುವುದಿಲ್ಲ. ವ್ಯಕ್ತಿ ನೀಡಿದ ವರದಿಯನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.
4. ವ್ಯಕ್ತಿಯ ಸ್ವಂತ ಅಭಿಪ್ರಾಯಗಳು ವರದಿಯಲ್ಲಿ ಸೇರಿಕೊಳ್ಳುವ ಸಾಧ್ಯತೆ ಹೆಚ್ಚು.
5. ಸಮೀಕ್ಷಾ ವಿಧಾನ Survey Method)
ಚುನಾವಣಾ ಸಮಯದಲ್ಲಿ ದಿನಪತ್ರಿಕೆಗಳು, ಟಿ.ವಿ. ಚಾನಲ್‌ಗಳು ಹಾಗೂ ಇತರ ಸುದ್ದಿ ಮಾದ್ಯಮಗಳು ಜನರು ಯಾರಿಗೆ ಮತ ನೀಡುತ್ತಾರೆ ಎಂಬುದನ್ನು ತಿಳಿಯಲು ಸಮೀಕ್ಷೆ ನಡೆಸುವುದನ್ನು ನೀವೆಲ್ಲರೂ ನೋಡಿರುತ್ತೀರಿ. ಒಂದು ನಿರ್ಧಿಷ್ಟ ವಿಷಯದ ಬಗ್ಗೆ ಜನರ ಅಭಿಪ್ರಾಯ, ಮನೋಭಾವಗಳನ್ನು ತಿಳಿಯಲು ಸಮೀಕ್ಷಾ ವಿಧಾನವನ್ನು ಅನುಸರಿಸಲಾಗುವುದು. ಪ್ರಾರಂಭದಲ್ಲಿ ಸಮೀಕ್ಷಾ ವಿಧಾನವನ್ನು ಸಮಾಜದ ವಾಸ್ತವಾಂಶಗಳನ್ನು ಅರಿಯಲು ಬಳಸಲಾಗುತ್ತಿತ್ತು. ಆದ್ದರಿಂದ ಜನರ ಆರ್ಥಿಕ ಮಟ್ಟ, ಸಾಕ್ಷರತೆ ಮುಂತಾದವುಗಳನ್ನು ತಿಳಿಯಲು ಸಮೀಕ್ಷಾ ವಿಧಾನವನ್ನು ಬಳಸಲಾಗುತ್ತಿತ್ತು. ಅದೇ ರೀತಿ ಕುಟುಂಬ ಯೋಜನೆ. ಅಧಿಕಾರವಿಕೇಂದ್ರೀಕರಣದ ಬಗ್ಗೆ, ಆರೋಗ್ಯ, ಶಿಕ್ಷಣ, ನೈರ್ಮಲ್ಯ, ಮುಂತಾದವುಗಳ ಬಗ್ಗೆ ಜನಾಭಿಪ್ರಾಯ ತಿಳಿಯಲು ಸಮೀಕ್ಷಾ ವಿಧಾನವನ್ನು ಅನುಸರಿಸಲಾಗುತ್ತಿತ್ತು. ಆದರೆ ಈಗ ಸಮೀಕ್ಷಾ ವಿಧಾನವನ್ನು ಹೆಚ್ಚು ಸುಧಾರಿಸಿದ ತಂತ್ರವಾಗಿ ವಿವಿಧ ಸನ್ನಿವೇಶಗಳಲ್ಲಿ ಕಾರ್ಯ-ಕಾರಣ ಸಂಬಂಧವನ್ನು ಅಧ್ಯಯನ ಮಾಡಲು ಹೆಚ್ಚು ಹೆಚ್ಚು ಬಳಸಲಾಗುತ್ತಿದೆ. ಸಮೀಕ್ಷಾ ವಿಧಾನದ ಯಶಸ್ಸು. ಆಯ್ಕೆ ಮಾಡುವ ಮಾದರಿಯನ್ನು (Sample) ಅವಲಂಬಿಸಿರುತ್ತದೆ.
ಸಮೀಕ್ಷಾ ವಿಧಾನವು ದತ್ತಾಂಶ ಸಂಗ್ರಹಣೆಗಾಗಿ ವಿವಿಧ ತಂತ್ರಗಳನ್ನು ಅನುಸರಿಸುತ್ತದೆ. ಹೆಸರಿಸಬಹುದಾದ ಕೆಲವು ತಂತ್ರಗಳೆಂದರೆ ಸಂದರ್ಶನ ವಿಧಾನ, ಪ್ರಶ್ನಾವಳಿ ವಿಧಾನ, ದೂರವಾಣಿ ಮೂಲಕ ಸಮೀಕ್ಷೆ ನಡೆಸುವುದು. ನಿಯಂತ್ರಿತ ಸನ್ನಿವೇಶದಲ್ಲಿ ಅವಲೋಕನ ಮಾಡುವುದು ಮುಂತಾದವು. ಈ ತಂತ್ರಗಳ ಬಗ್ಗೆ ಕೆಳಗೆ ವಿವರಿಸಲಾಗಿದೆ.
ಸಂದರ್ಶನ :- ಇದೊಂದು ಹೆಚ್ಚು ಬಳಕೆಯಲ್ಲಿರುವ ತಂತ್ರ. ಜನರಿಂದ ವಿವಿಧ ವಿಷಯಗಳ ಬಗ್ಗೆ
ಅಭಿಪ್ರಾಯ ಸಂಗ್ರಹಿಸಲು ಸಂದರ್ಶನ ವಿಧಾನವನ್ನು ಅನುಸರಿಸುವರು. ವ್ಯಕ್ತಿಯನ್ನು ನೇರವಾಗಿ ಭೇಟಿ ಮಾಡಿ ನಿಗದಿಪಡಿಸಿದ ಇಲ್ಲವೇ ಸಂದರ್ಭೋಚಿತವಾಗಿ ಪ್ರಶ್ನೆಗಳನ್ನು ಕೇಳಿ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಲಾಗುವುದು. ಉದಾಹರಣೆಗೆ: ‘ಜನ ಯಾವ ಸಾಬೂನು ಹೆಚ್ಚು ಬಳಸುತ್ತಾರೆ’? ಎಂಬ ಬಗ್ಗೆ ತಿಳಿಯಲು ಮನೆಮನೆಗೆ ಹೋಗಿ ಜನರನ್ನು ಭೇಟಿ ಮಾಡಿ ಅವರ ಅಭಿಪ್ರಾಯ ಸಂಗ್ರಹಿಸುವುದು, ಇತ್ಯಾದಿ. ಸಂದರ್ಶನದಲ್ಲಿ ನಿರ್ದೇಶಿತ ಮತ್ತು ಅನಿರ್ದೇಶಿತ ಸಂದರ್ಶನ ಎಂಬ ಎರಡು ವಿಧಗಳಿವೆ. ಖುದ್ದು ಭೇಟಿ ಮಾಡಿ ಸಂಗ್ರಹಿಸುವ ಮಾಹಿತಿ ಸತ್ಯಕ್ಕೆ ಹೆಚ್ಚು ಹತ್ತಿರವಾಗಿರುತ್ತದೆ.
ಪ್ರಶ್ನಾವಳಿಗಳನ್ನು ಬಳಸಿ ಸಮೀಕ್ಷೆ ನಡೆಸುವುದು:
ಸಮೀಕ್ಷೆ ನಡೆಸಲು ಬಳಸುವ ವಿಧಾನಗಳಲ್ಲಿ ಅತಿ ಸಾಮಾನ್ಯವಾಗಿ ಬಳಸುವ ತಂತ್ರವೇ ಪ್ರಶ್ನಾವಳಿ ವಿಧಾನ. ಇದು ಕಡಿಮೆ ಖರ್ಚಿನ ಮತ್ತು ತುಂಬಾ ಸರಳವಾದ ವಿಧಾನ. ಇಲ್ಲಿ ಉತ್ತರಿಸುವ ವ್ಯಕ್ತಿಗೆ ಮೊದಲೇ ಸಿದ್ಧಪಡಿಸಿದ ಪ್ರಶ್ನೆಗಳ ಒಂದು ಪಟ್ಟಿ ನೀಡಲಾಗುವುದು. ಅದರಲ್ಲಿ ಉತ್ತರಗಳನ್ನು ನೀಡಲಾಗಿರುತ್ತದೆ. ಉತ್ತರಿಸುವ ವ್ಯಕ್ತಿ ಪ್ರಶ್ನೆಗಳನ್ನು ಓದಿ ಆ ಪ್ರಶ್ನೆಗಳ ಮುಂದೆ ಇರುವ ಉತ್ತರಗಳಲ್ಲಿ ತನಗೆ ಸರಿ ಎನಿಸಿದ ಉತ್ತರವನ್ನು ಟಿಕ್ (?) ಮಾಡುವ ಮೂಲಕ ಇಲ್ಲವೇ ವೃತ್ತ ಸುತ್ತುವ ಮೂಲಕ ಉತ್ತರಿಸಬೇಕು. ಕೆಳಕಂಡ ಉದಾಹರಣೆ ಸಮೀಕ್ಷೆಯಲ್ಲಿ ಪ್ರಶ್ನಾವಳಿ ಬಳಕೆಯನ್ನು ಸ್ಪಷ್ಟವಾಗಿ ತಿಳಿಸುತ್ತದೆ.
4. ವ್ಯಕ್ತಿ ವೃತ್ತಾಂತ ವಿಧಾನ (Case study) :
ಒಬ್ಬ ವ್ಯಕ್ತಿಯ ಬಗ್ಗೆ ಆಳವಾಗಿ ಮತ್ತು ವಿವರವಾಗಿ ಅಧ್ಯಯನ ಮಾಡಲು ಈ ವಿಧಾನವನ್ನು ಅನುಸರಿಸಲಾಗುವುದು. ವ್ಯಕ್ತಿವೃತ್ತಾಂತ ವಿಧಾನದಲ್ಲಿ ಅಧ್ಯಯನಕ್ಕಾಗಿ ಆಯ್ಕೆ ಮಾಡುವ ವ್ಯಕ್ತಿ ಕೇಳುವ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸುವಂತಿರಬೇಕು.
ವ್ಯಕ್ತಿವೃತ್ತಾಂತ ವಿಧಾನದಲ್ಲಿ ವಿವಿಧ ವಿಧಾನಗಳನ್ನು ಅನುಸರಿಸಿ ಮಾಹಿತಿ ಸಂಗ್ರಹಿಸಲಾಗುವುದು. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಸಂದರ್ಶನ ವಿಧಾನ. ಅವಲೋಕನ ವಿಧಾನ, ಪ್ರಶ್ನಾವಳಿ ವಿಧಾನ, ಮನೋವೈಜ್ಞಾನಿಕ ಪರೀಕ್ಷೆಗಳ ಬಳಕೆ, ಇತ್ಯಾದಿ. ವ್ಯಕ್ತಿ ವೃತ್ತಾಂತ ವಿಧಾನದಿಂದ ಒಬ್ಬ ವ್ಯಕ್ತಿಯ ವ್ಯಕ್ತಿತ್ವ, ಮಾನಸಿಕ ಸಮಸ್ಯೆಗಳು, ವರ್ತನಾ ಸಮಸ್ಯೆಗಳು ಮುಂತಾದವುಗಳನ್ನು ನಿಖರವಾಗಿ ಅಧ್ಯಯನ ಮಾಡಿ ಪರಿಹಾರ ಸೂಚಿಸಬಹುದು.
ವ್ಯಕ್ತಿ ವೃತ್ತಾಂತ ವಿಧಾನದಲ್ಲಿ ಮಾಹಿತಿಯನ್ನು ಅಧ್ಯಯನಕ್ಕೆ ಒಳಗಾದ ವ್ಯಕ್ತಿಯ ತಂದೆ-ತಾಯಿಯರಿಂದ ಒಡಹುಟ್ಟಿದವರಿಂದ ಪಾಠ ಕಲಿಸಿದ ಶಿಕ್ಷಕರಿಂದ, ಸ್ನೇಹಿತರಿಂದ, ಶಾಲಾ ದಾಖಲೆಗಳಿಂದ ಇತ್ಯಾದಿ.