Mass dynamics:ಸಮೂಹ ಗತಿ ಶಾಸ್ತ್ರ ಫ್ಲಾಂಡರ್‌ರವರ ಅಂತರ್ ಕ್ರಿಯೆಯ ವಿಶ್ಲೇಷಣಾ ಕ್ರಮ ಇಲ್ಲಿದೆ.

Mass dynamics:ಸಮೂಹ ಗತಿ ಶಾಸ್ತ್ರ ಫ್ಲಾಂಡರ್‌ರವರ ಅಂತರ್ ಕ್ರಿಯೆಯ ವಿಶ್ಲೇಷಣಾ ಕ್ರಮ  ಇಲ್ಲಿದೆ.

ಶಿಕ್ಷಕ ಮಾತು : ಪರೋಕ್ಷ ಪ್ರಭಾವ

1.ಭಾವನೆಗಳನ್ನು ಸ್ವೀಕರಿಸುತ್ತಾನೆ : ವಿದ್ಯಾರ್ಥಿಗಳ ಭಾವನೆಗಳನ್ನು ಅವರಲ್ಲಿ ಯಾವುದೇ ರೀತಿಯ ಭಯ ಉಂಟು ಮಾಡದಂತೆ ಸ್ವೀಕರಿಸುತ್ತಾನೆ ಮತ್ತು ಸೃಷ್ಟಿಕರಿಸುತ್ತಾನೆ. ಭಾವನೆಗಳು ಧನಾತ್ಮಕ ಅಥವಾ ಋಣಾತ್ಮಕವಾಗಿರಬಹುದು. ನಿರೀಕ್ಷಿತ ಹಾಗೂ ಪುನರ್‌ಸ್ಮರಣೆಯ ಭಾವನೆಗಳನ್ನು ಇದು ಒಳಗೊಂಡಿದೆ.

2. ಹೊಗಳುತ್ತಾನೆ ಅಥವಾ ಪ್ರೋತ್ಸಾಹಿಸುತ್ತಾನೆ :

ವಿದ್ಯಾರ್ಥಿಗಳ ಅನುಕ್ರಿಯೆ ಅಥವಾ ವರ್ತನೆಯನ್ನು ಹೊಗಳುತ್ತಾನೆ ಅಥವಾ ಪ್ರೋತ್ಸಾಹಿಸುತ್ತಾನೆ. ಇತರರಿಗೆ ನೋವನ್ನುಂಟು ಮಾಡದೇ ತಮಾಷೆಯಾಗಿ ಅವರನ್ನು ಪ್ರೋತ್ಸಾಹಿಸುವುದನ್ನು ಒಳಗೊಳ್ಳುತ್ತದೆ.

3. ವಿದ್ಯಾರ್ಥಿಗಳ ವಿಚಾರಗಳನ್ನು ಒಪ್ಪಿಕೊಳ್ಳುತ್ತಾನೆ ಅಥವಾ ಬಳಸಿಕೊಳ್ಳುತ್ತಾನೆ.

4. ಪ್ರಶ್ನಿಸುತ್ತಾನೆ :

ವಿದ್ಯಾರ್ಥಿಗಳು ಉತ್ತರಿಸಲು ಸಾಧ್ಯವಾಗುವಂತೆ ವಿಷಯ ಅಥವಾ ಕ್ರಮದ ಬಗ್ಗೆ ಪ್ರಶ್ನಿಸುತ್ತಾನೆ.

5. ಉಪನ್ಯಾಸ ನೀಡುತ್ತಾನೆ :

ವಿಷಯದ ಬಗ್ಗೆ ಮಾಹಿತಿ ನೀಡುತ್ತಾನೆ. ತನ್ನ ವಿಚಾರಗಳನ್ನು ಅಭಿವ್ಯಕ್ತಿಸುತ್ತಾನೆ. ಅಲಂಕಾರಿಕ ಪ್ರಶ್ನೆಗಳನ್ನು ಕೇಳುತ್ತಾನೆ.

6. ನಿರ್ದೇಶನಗಳನ್ನು ನೀಡುತ್ತಾನೆ : ವಿದ್ಯಾರ್ಥಿಯು ಅನುಸರಿಸಬೇಕಾದಂತಹ ನಿರ್ದೇಶನಗಳು ಅಥವಾ ಆದೇಶಗಳನ್ನು ನೀಡುತ್ತಾನೆ.

7. ಟೀಕಿಸುತ್ತಾನೆ ಅಥವಾ ತನ್ನ ವರ್ತನೆಯನ್ನು ಸಮರ್ಥಿಸಿಕೊಳ್ಳುತ್ತಾನೆ : ವಿದ್ಯಾರ್ಥಿಗಳ ಅನಪೇಕ್ಷಿತ ವರ್ತನೆಗಳನ್ನು ಅಪೇಕ್ಷಿತ ವರ್ತನೆಗಳಾಗಿ ಬದಲಿಸಲು ಟೀಕಿಸುತ್ತಾನೆ. ಶಿಕ್ಷಕ ತಾನು ಮಾಡಿದ್ದನ್ನು ಸಮರ್ಥಿಸಿಕೊಳ್ಳುತ್ತಾನೆ.

8. ವಿದ್ಯಾರ್ಥಿ ಮಾತು :

ವಿದ್ಯಾರ್ಥಿ ಮಾತು ಅನುಕ್ರಿಯೆಯಾಗಿ : ಶಿಕ್ಷಕರಿಗೆ ಅನುಕ್ರಿಯೆ ನೀಡಲು ವಿದ್ಯಾರ್ಥಿಗಳು ಮಾತನಾಡುತ್ತಾರೆ. ಶಿಕ್ಷಕರು ಸಂಪರ್ಕವನ್ನು ಸ್ಥಾಪಿಸುತ್ತಾರೆ. ಅಥವಾ ವಿದ್ಯಾರ್ಥಿಗಳ ಹೇಳಿಕೆಗಳನ್ನು ನಿರೀಕ್ಷಿಸುತ್ತಾರೆ.

9. ವಿದ್ಯಾರ್ಥಿ ಮಾತು ಸ್ವಯಂ ಪ್ರೇರಿತವಾಗಿ : ವಿದ್ಯಾರ್ಥಿಗಳೇ ಸ್ವಯಂಪ್ರೇರಿತರಾಗಿ ಮಾತನಾಡಲು ಪ್ರಾರಂಭಿಸುತ್ತಾರೆ.

10. ಮೌನ ಅಥವಾ ಗೊಂದಲ : ಬಿಡುವುಗಳು, ಅಲ್ಪ ಅವಧಿಗಳ ಮೌನ, ಗೊಂದಲದ ಅವಧಿಗಳು ಈ ಸಂದರ್ಭದಲ್ಲಿ ವೀಕ್ಷಕ ಸಂವಹನದಿಂದ ಏನನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಶಿಕ್ಷಕ ವಿದ್ಯಾರ್ಥಿಗಳ ಭಾವನೆಗಳನ್ನು ಸ್ವೀಕರಿಸಿ, ಅವರನ್ನು ಪ್ರೋತ್ಸಾಹಿಸಿ ಅವರ ಅಭಿಪ್ರಾಯಗಳನ್ನು ಒಪ್ಪಿ ಅಥವಾ ಉಪಯೋಗಿಸಿ, ಅಗತ್ಯವಾದ ಯುಕ್ತ ಪ್ರಶ್ನೆಗಳನ್ನು ಕೇಳಿ ವಿಷಯವನ್ನು ಸ್ಪಷ್ಟಿಕರಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ದೊರೆಯುತ್ತದೆ. ಅವರು ಸ್ವಯಂ ಪ್ರೇರಿತರಾಗಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾರೆ. ಅಂತರ್ ಕ್ರಿಯೆಯ ಈ ನಮೂನೆ ಕಲಿಕೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುತ್ತದೆ.

ಸಮೂಹದ ವರ್ತನೆಯ ಮೇಲೆ ಪ್ರಭಾವ ಬೀರುವ ಅಂಶಗಳು :

ಸಾಮಾನ್ಯವಾಗಿ ಸಮೂಹದ ವರ್ತನೆಯ ಮೇಲೆ ಹಲವಾರು ಮನೋವೈಜ್ಞಾನಿಕ ಅಂಶಗಳು ಪ್ರಭಾವ ಬೀರುತ್ತವೆ. ಅವುಗಳಲ್ಲಿ ಪ್ರಮುಖವಾದುವುಗಳೆಂದರೆ – ಸಹಾನುಭೂತಿ, ಸಲಹೆ, ಅನುಕರಣೆ, ವೈಯಕ್ತಿಕ ಹಾಗೂ ಸಮೂಹ ಗುರಿಗಳು

ಸಹಾನುಭೂತಿ :

ಸಹಾನುಭೂತಿ ಭಾವನಾತ್ಮಕವಾದ ಸಹಜವಾದ ಮಾನವೀಯಗುಣ, ನಾವು ನೋಡಿದ ಅಥವಾ ಕೇಳಿದ ವಿಷಯಗಳಿಗೆ ನಮ್ಮ ಅಭಿಪ್ರಾಯಗಳನ್ನು ಭಾವನೆಗಳ ಮೂಲಕ ವ್ಯಕ್ತಪಡಿಸುವುದೇ ಸಹಾನುಭೂತಿ, ಸಹಾನುಭೂತಿ ಸಾಮಾಜಿಕ ಗುಂಪಿನಲ್ಲಿ ಜನರನ್ನು ಒಂದುಗೂಡಿಸಿ ಸಾಮಾಜಿಕ ಬೆಳವಣಿಗೆಗೆ ಪ್ರೇರಣೆಯಾಗುತ್ತದೆ. ಇದು ಬೇರೆಯವರೊಂದಿಗೆ ನಮ್ಮನ್ನು ಗುರ್ತಿಸಿಕೊಳ್ಳುವಂತೆ ಮಾಡುತ್ತದೆ.

ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಸಹಾನುಭೂತಿ ಹೊಂದಿರಬೇಕು. ವಿದ್ಯಾರ್ಥಿಗಳ ವರ್ತನೆಯನ್ನು ಅರ್ಥಮಾಡಿಕೊಳ್ಳಲು ಶಿಕ್ಷಕರಲ್ಲಿ ಸಹೃದಯತೆ ಇರಬೇಕು. ಮಕ್ಕಳ ಬಗ್ಗೆ ಮಮತೆ ಇರಬೇಕು. ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸಲು ಇದರಿಂದ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಕಷ್ಟ ಸುಖಗಳಲ್ಲಿ ಪಾಲ್ಗೊಳ್ಳಲು ಇದರಿಂದ ಸಾಧ್ಯವಾಗುತ್ತದೆ.

ಸಲಹೆ: ಇತರರ ವಿಚಾರಗಳನ್ನು ಅಂಗೀಕರಿಸುವುದೇ ಸಲಹೆ, ಇತರೆ ವ್ಯಕ್ತಿ ಅಥವಾ ವಸ್ತುಗಳಿಂದ ಧ್ವನಿತವಾಗುವ ಭಾವಗಳು ನಮ್ಮ ಆಲೋಚನೆ ಮತ್ತು ವರ್ತನೆಗಳನ್ನು ಅನೇಕ ವೇಳೆ ರೂಪಿಸುತ್ತವೆ. ಇಂತಹ ಭಾವನೆಗಳನ್ನು ನಾವು ಸಲಹೆ ಎಂದು ಕರೆಯುತ್ತೇವೆ. ಇತರರಿಗೆ ನಾವು ಕೊಡುವ ಸಹಕಾರ, ಪ್ರತಿಕ್ರಿಯೆ, ಮಾರ್ಗದರ್ಶನ, ಧೈರ್ಯ, ಸ್ಫೂರ್ತಿ ಇತ್ಯಾದಿಗಳೆಲ್ಲವೂ ಸಲಹೆಯ ಮಾದರಿಗಳು. ಸಲಹೆ ಇತರರ ಅಭಿಪ್ರಾಯವನ್ನು ಒಪ್ಪಿಕೊಳ್ಳುವಂತೆ ಮತ್ತು ಕಾರ್ಯಗತಗೊಳಿಸುವಂತೆ ಮಾಡುತ್ತದೆ.

ಸಲಹೆಯಲ್ಲಿ ಮೂರು ಪ್ರಕಾರಗಳನ್ನು ಕಾಣುತ್ತೇವೆ:

ಸ್ಥಾನ ಗೌರವ ಸಲಹೆ :

ಹಿರಿಯರು ಕಿರಿಯರಿಗೆ, ಶಿಕ್ಷಕರು ವಿದ್ಯಾರ್ಥಿಗಳಿಗೆ, ತಂದೆ ತಾಯಿಗಳು ಮಕ್ಕಳಿಗೆ ನೀಡುವ ಸಲಹೆಯನ್ನು ಸ್ಥಾನ ಗೌರವ ಸಲಹೆ ಎನ್ನುವರು. ಉದಾ: ಅಧಿಕಾರಿಗಳು, ಧರ್ಮಗುರುಗಳು, ಮಂತ್ರಿಗಳು ಇತರರು ನೀಡುವ ಸಲಹೆ.

ಸಮೂಹ ಸಲಹೆ :

ವ್ಯಕ್ತಿಯು ಸಂಘ ಸಂಸ್ಥೆಗಳಲ್ಲಿರುವಾಗ ಅಲ್ಲಿಯ ಹೆಚ್ಚಿನ ಸದಸ್ಯರು ನೀಡುವ ಸಲಹೆಯನ್ನು ಅನುಸರಿಸಬೇಕಾಗುತ್ತದೆ. ಕೆಲವೊಮ್ಮೆ ಅದು ವ್ಯಕ್ತಿಗೆ ಅಹಿತವಾಗಿದ್ದರೂ ಸಹ ಸಂಖ್ಯಾ ಬಾಹುಳ್ಯದ ಅಭಿಪ್ರಾಯಕ್ಕೆ ಮಣಿದು ಒಪ್ಪಿಕೊಳ್ಳಬೇಕಾಗುತ್ತದೆ. ರಾಜಕೀಯ ಚಳುವಳಿಗಳಲ್ಲೂ, ಧಾರ್ಮಿಕ ಪ್ರಚಾರಗಳಲ್ಲೂ ವ್ಯಕ್ತಿ ಸಮೂಹ ಸಲಹೆಯನ್ನು ಒಪ್ಪಿಕೊಳ್ಳುವನು.

ಸ್ವಯಂ ಸಲಹೆ :

ವ್ಯಕ್ತಿಯು ತನ್ನೊಳಗೆ ಮಾಡಿಕೊಳ್ಳುವ ಸಲಹೆ ಸ್ವಯಂ ಸಲಹೆಯಾಗಿದೆ. ಅವನ ಹಿಂದಿನ ಅನುಭವಗಳಿಂದ ಅವನಿಗೆ ಇಂತಹ ಸಲಹೆಗಳು ಮನದಲ್ಲಿ ಮೂಡಿಬರುತ್ತವೆ. ಅದಕ್ಕನುಗುಣವಾಗಿ ಅವನು ಕಾರ್ಯಪ್ರವೃತ್ತನಾಗಿ ಯಶಸ್ಸನ್ನು ಪಡೆಯುತ್ತಾನೆ.

ವ್ಯಕ್ತಿಯ ಸಾಮಾಜಿಕ ಜೀವನದಲ್ಲಿ ಸಲಹೆ ಪ್ರಮುಖ ಪಾತ್ರವಹಿಸುತ್ತದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ, ನೈತಿಕ ತರಬೇತಿಗೆ ಸಲಹೆ ಅತ್ಯಗತ್ಯ. ಸಾಮಾಜಿಕ ನಿಯಂತ್ರಣ ಮತ್ತು ಬದಲಾವಣೆಗೆ ಪ್ರಮುಖ ಸಾಧನ. ಶಾಲೆಗಳಲ್ಲಿ ಶಿಕ್ಷಕರ ಸಲಹೆ ಪರಿಣಾಮಕಾರಿಯಾಗಿರಬೇಕಾದರೆ ಶಿಕ್ಷಕರ ಸ್ಥಾನಮಾನ, ಸಲಹೆಯ ಗುರಿ ಮತ್ತು ಉದ್ದೇಶಗಳು ಉತ್ತಮವಾಗಿರಬೇಕು.

ಅನುಕರಣೆ :

ಅನುಕರಣೆ ಒಂದು ಪ್ರಾಥಮಿಕ ಸಾಮಾಜಿಕ ಕ್ರಿಯೆ ಮತ್ತೊಬ್ಬರು ವರ್ತಿಸಿದಂತೆ ನಾವು ವರ್ತಿಸುವುದೇ ಅನುಕರಣೆ. ಮಕ್ಕಳ ಕಲಿಕೆಯು ಪ್ರಾರಂಭದಲ್ಲಿ ಅನುಕರಣೆಯಿಂದಲೇ ನಡೆಯುತ್ತದೆ. ಅನುಕರಣೆ ಸಾರ್ವತ್ರಿಕವಾದದ್ದು. ಸಮಾಜದ ವಿಕಾಸ, ಸಂಸ್ಕೃತಿಯ ಪ್ರಸರಣ, ವ್ಯಕ್ತಿಗಳ ಬೆಳವಣಿಗೆ, ಏಕರೂಪತೆ ಮತ್ತು ಅನುರೂಪತೆಗೆ, ಸಹಕಾರ ಜೀವನಕ್ಕೆ ಅನುಕರಣೆಯೇ ಮೂಲ ಕಾರಣ.

ಅನುಕರಣೆಯಲ್ಲಿ ಪ್ರಾಥಮಿಕ ಅನುಕರಣೆ ಮತ್ತು ಉದ್ದೇಶ ಪೂರ್ವಕ ಅನುಕರಣೆ ಎಂಬ ಎರಡು ಪ್ರಕಾರಗಳಿವೆ. ಪ್ರಾಥಮಿಕ ಅನುಕರಣೆಯು ಅದರ ಪ್ರಜ್ಞೆ ಇಲ್ಲದೆಯೇ ಸಾಗುತ್ತದೆ. ಮಗು ಸುತ್ತಮುತ್ತಲಿನ ಅನೇಕ ವರ್ತನೆಗಳನ್ನು ನೋಡಿ ಹಾಗೆಯೇ ಮಾಡಲು ಪ್ರಯತ್ನಿಸುತ್ತಾನೆ. ಮಾತನಾಡುವುದು, ಊಟ ಮಾಡುವುದು, ಬಟ್ಟೆ ಹಾಕಿಕೊಳ್ಳುವುದು, ಸಂಪ್ರದಾಯಗಳು ಮುಂತಾದವುಗಳನ್ನು ಅನುಕರಣೆಯಿಂದಲೇ ಕಲಿಯುತ್ತಾನೆ.

ಕೆಲವೊಮ್ಮೆ ಏನನ್ನೂ ಆರಿತುಕೊಳ್ಳದೇ ಸ್ವಾಭಾವಿಕವಾಗಿ ಕೆಲವು ಗುಣಗಳನ್ನು ಅನುಕರಿಸುವುದಕ್ಕೆ ಅಂಧಾನುಕರಣೆ ಎನ್ನುವರು.

ಉದ್ದೇಶಪೂರ್ವಕ ಅನುಕರಣೆ : ಕೆಲವೊಮ್ಮೆ ನಾವು ಉದ್ದೇಶಪೂರ್ವಕವಾಗಿ ಪ್ರಜ್ಞಾವಂತಿಕೆಯಿಂದ ಅನುಕರಣೆ ಮಾಡುತ್ತೇವೆ.

ನಮಗೆ ಆದರ್ಶವೆನಿಸಿದ ವಿಚಾರಗಳನ್ನು ಸುಲಭವಾಗಿ ಒಪ್ಪಿಕೊಳ್ಳುತ್ತೇವೆ. ಹಿರಿಯರ, ಅನುಭವಿಗಳ, ಆದರ್ಶ ವ್ಯಕ್ತಿಗಳ,ಬುದ್ದಿವಂತರ ವಿಚಾರಗಳನ್ನು ಮೆಚ್ಚಿಕೊಂಡು ಅವುಗಳನ್ನು ಉದ್ದೇಶಪೂರ್ವಕವಾಗಿ ಕಲಿತು ಅನುಸರಿಸುತ್ತೇವೆ. ಇಂತಹ ಅನುಕರಣೆಯನ್ನು ಉದ್ದೇಶಪೂರ್ವಕ ಅನುಕರಣೆ ಎನ್ನುವರು.

ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳು ತಮ್ಮನ್ನು ಅನುಕರಿಸಲು ಸಾಧ್ಯವಾಗುವಂತಹ ಆದರ್ಶಗಳು, ಶಿಸ್ತಿನ ಜೀವನ ಹಾಸ ಸಮಾಜದಲ್ಲಿ ಅನುಕರಣೆಯಿಂದ ಮಕ್ಕಳ ವ್ಯಕ್ತಿತ್ವವು ರೂಪುಗೊಳ್ಳುತ್ತದೆ. ಬಾಲ್ಯದಲ್ಲಿ ಅನುಕರಣಾ ಶಕ್ತಿ ತೀವ್ರವಾಗಿರುತ್ತದೆ. ವ್ಯಕ್ತಿತ್ವದ ಗುಣಗಳನ್ನು ಹೊಂದಿರಬೇಕು. ಶಿಕ್ಷಕ ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು.

ವೈಯಕ್ತಿಕ ಹಾಗೂ ಸಮೂಹದ ಗುರಿಗಳು : ಎಲ್ಲಾ ವ್ಯಕ್ತಿಗಳು ಹಾಗೂ ಸಮೂಹಗಳು ತಮ್ಮದೇ ಆದ ಗುರಿಗಳನ್ನು ಹೊಂದಿರುತ್ತವೆ. ವ್ಯಕ್ತಿಗಳ ಹಲವು ವೈಯಕ್ತಿಕ ಗುರಿಗಳು ಸಮೂಹದಲ್ಲಿ ಈಡೇರುತ್ತವೆ. ಆದ್ದರಿಂದ ಅವರು ಸ್ವ-ಇಚ್ಛೆಯಿಂದ ಸಮೂಹಗಳನ್ನು ಸೇರುತ್ತಾರೆ. ಶಿಕ್ಷಣದ ಗುರಿಗಳೇ ಈ ಸಮೂಹದ ಗುರಿಗಳು, ಸಮೂಹ ತನ್ನ ಗುರಿಗಳನ್ನು ತಾನೇ ನಿರೂಪಿಸಿಕೊಳ್ಳುವುದರಿಂದ ಚಟುವಟಿಕೆಗಳಲ್ಲಿ ಸದಸ್ಯರು ಉತ್ಸಾಹಭರಿತರಾಗಿ ಪಾಲ್ಗೊಳ್ಳುತ್ತಾರೆ. ತರಗತಿಯ ಗುರಿಗಳು ವಿದ್ಯಾರ್ಥಿಗಳ ಆವಶ್ಯಕತೆಗಳಿಗೆ ಅನುಗುಣವಾಗಿ ರೂಪಿತವಾಗಿರುತ್ತವೆ. ಗುರಿಗಳ ಬಗ್ಗೆ ಸದಸ್ಯರು ತಳೆದಿರುವ ಮನೋಧೋರಣೆ, ಪ್ರಮುಖ ತೀರ್ಮಾನಗಳನ್ನು ಯಾರು ಹೇಗೆ ಕೈಗೊಳ್ಳುತ್ತಾರೆ ಎಂಬುದು ಸಮೂಹದ ರಚನೆಯ ಸ್ವರೂಪವನ್ನು ನಿರ್ಧರಿಸುತ್ತದೆ. ಗುರಿ ಮಹತ್ವಪೂರ್ಣದ್ದು ಮತ್ತು ಸಾಧಿಸಬೇಕಾದದ್ದು ಎಂದು ಸದಸ್ಯರು ತೀರ್ಮಾನಿಸಿದರೆ ಸಮೂಹ ಪ್ರಗತಿ ಪಥದಲ್ಲಿ ಮುನ್ನಡೆಯುತ್ತದೆ,

ಸಮೂಹದ ಸಂಸಕ್ತತೆ Group Cohesiveness)

ಒಂದು ಸಮೂಹದ ಸದಸ್ಯರ ನಡುವೆ ನಿರಂತರ ಅಂತರ್‌ಕ್ರಿಯೆ ಅವರು ಒಟ್ಟಾಗಿ ಇರುವಂತೆ ಮತ್ತು ಸಾಮರಸ್ಯದಿಂದ ಬಾಳ್ವೆ ನಡೆಸುವಂತೆ ಮಾಡುತ್ತದೆ. ಹೀಗೆ ಸದಾ ಒಗ್ಗಟ್ಟಿನಿಂದ ಇರುವ ಪ್ರವೃತ್ತಿಯೇ ಸಮೂಹದ ಸಂಸಕ್ತತೆ. ಒಂದು ತರಗತಿಯಲ್ಲಿರುವ ವಿದ್ಯಾರ್ಥಿಗಳ ಸಂಸಕ್ತತೆ ಕಲಿಕೆಯ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ನೆರವಾಗುತ್ತದೆ. ಸಂಸಕ್ತತೆ ಹೊಂದಿರುವ ಸಮೂಹದ ಲಕ್ಷಣಗಳೆಂದರೆ-

1. ಅವರು ಸಾಮಾನ್ಯ ಗುರಿಗಳನ್ನು ಹೊಂದಿರುತ್ತಾರೆ.

2. ಸದಸ್ಯರು ಸಮಾನ ಹಿನ್ನೆಲೆ ಹೊಂದಿರುತ್ತಾರೆ.

3. ಸಮೂಹದಲ್ಲಿ ಬದಲಾಗುವ ಸನ್ನಿವೇಶಗಳಿದ್ದರೂ ಗುಂಪು ಒಗ್ಗಟ್ಟಿನಿಂದ ಕೂಡಿರುತ್ತದೆ.

4. ಸದಸ್ಯರು ಗುಂಪಿನ ಒಳಿತಿಗಾಗಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಅಭಿಪ್ರೇರಣೆ ಹೊಂದಿರುತ್ತಾರೆ.

5. ಸ್ವ-ಹಿತಾಸಕ್ತಿಗಿಂತ ಗುಂಪಿನ ಹಿತಾಸಕ್ತಿ ಮುಖ್ಯವೆಂದು ಭಾವಿಸುತ್ತಾರೆ.

ಸಹಕಾರ ಮನೋಭಾವ ಸಂಸಕ್ತತೆಯನ್ನು ಹೆಚ್ಚಿಸುತ್ತದೆ, ಉತ್ತಮ ಸಂವಹನ ಮತ್ತು ಅಂತರ್ ಕ್ರಿಯೆಗಳೂ ಸಹ ಸಮೂಹ ಒಟ್ಟಾಗಿರುವುದಕ್ಕೆ ಪೂರಕವಾಗಿವೆ. ಶಿಕ್ಷಕರ ಮನೋಭಾವ, ತರಗತಿ ಪರಿಸರ ಮತ್ತಿತರ ಅಂಶಗಳು ಸಮೂಹದ ಸದಸ್ಯರು ಒಟ್ಟಾಗಿರುವುದರ ಮೇಲೆ ಪ್ರಭಾವ ಬೀರುತ್ತವೆ. ಶಿಕ್ಷಕರು ವಿದ್ಯಾರ್ಥಿಗಳ ಚಟುವಟಿಕೆಗಳ ಮೇಲೆ ಪರೋಕ್ಷ ಪ್ರಭಾವ ಬೀರಬೇಕು ಮತ್ತು ಕಲಿಕೆಗೆ ನೆರವಾಗಬೇಕು.

ಸಮೂಹದ ಸಂಬಂಧಗಳ ಅಧ್ಯಯನ:

ಮಗುವಿನಲ್ಲಿ ಸಾಮಾಜಿಕ ಸಾಮರ್ಥ್ಯಗಳನ್ನು, ಕೌಶಲಗಳನ್ನು ಬೆಳೆಸುವ ಜವಾಬ್ದಾರಿ ಶಿಕ್ಷಕರದಾಗಿದೆ. ಆದ್ದರಿಂದ ತರಗತಿಯಲ್ಲಿ ನಡೆಯುವ ಸಮೂಹ ಪ್ರಕ್ರಿಯೆಗಳನ್ನು ಶಿಕ್ಷಕ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಸಮೂಹದಲ್ಲಿನ ಅಂತರ್ ಸಂಬಂಧಗಳನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಲು ಸಮಾಜ ಮಿತಿ ತಂತ್ರವನ್ನು ಬಳಸುವರು.

Leave a Comment