ವಿಕಾಸದ ಹಂತಗಳು(Stages of Personality Development)

ವಿಕಾಸದ ಹಂತಗಳು(Stages of Personality Development)

ವಿಕಾಸದ ಹಂತಗಳು(Stages of Personality Development)

ವಿಕಾಸದ ಹಂತಗಳು(Stages of Personality Development) :ಮನೋ ಲೈಂಗಿಕ ಬೆಳವಣಿಗೆ: (Psycho-Sexual Development):ಫ್ರಾಯ್ಡ್ ಪ್ರಕಾರ ಕಾಮವಾಂಭ (Libido) ಬೆಳವಣಿಗೆಯ ವಿವಿಧ ಹಂತಗಳನ್ನು ಹಾದು ಹೋಗುತ್ತದೆ. ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಹಾದು ಹೋಗುವಾಗ ಸ್ವಲ್ಪ ಪ್ರಮಾಣದ ಕಾಮವಾಂಛ ಹಿಂದಿನ ಹಂತದಲ್ಲಿ ಉಳಿಯುತ್ತದೆ. ಹಾಗಾಗಿ ಆಯಾಯ ಹಂತದ ಕೆಲವು ವರ್ತನೆಯ ಲಕ್ಷಣಗಳು ಪ್ರತಿಯೊಬ್ಬರಲ್ಲೂ (ದೊಡ್ಡವರಾದ ಮೇಲೂ) ಕಂಡುಬರುತ್ತವೆ. ಕೆಲವರಲ್ಲಿ ಕಾರಣಾಂತರದಿಂದ ಕಾಮವಾಂಛ ಮುಂದಿನ ಹಂತಕ್ಕೆ ಹೋಗದೆ ಹಿಂದಿನ ಹಂತದಲ್ಲಿಯೇ ಸ್ಥಿರೀಕರಣಗೊಳ್ಳುತ್ತದೆ. ಸ್ಥಿರೀಕರಣಗೊಂಡ ಹಂತದ ಲಕ್ಷಣಗಳು ವ್ಯಕ್ತಿಯಲ್ಲಿ ಕಂಡುಬರುತ್ತವೆ. ವ್ಯಕ್ತಿಯ ಜೀವಮಾನದಲ್ಲಿ ಕಾಮವಾಂಭೆ ಐದು ಹಂತಗಳನ್ನು ಹಾದುಹೋಗುತ್ತದೆ. ಅವುಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

1. ಬಾಯಿಯ ಹಂತ(Oral stage) (0-2 ವರ್ಷ): ನವಜಾತ ಶಿಶುವಿನಲ್ಲಿ ಕಾಮವಾಂಭ ಬಾಯಿಯಲ್ಲಿ ಕೇಂದ್ರೀಕೃತವಾಗಿರುತ್ತದೆ. ಮಗು ತನ್ನ ತಾಯಿಯ ಎದೆಯನ್ನು ಚೀಪುವ ಮೂಲಕ ಹಸಿವನ್ನು ನೀಗಿಸಿಕೊಳ್ಳುವುದರ ಜೊತೆಗೆ ತನ್ನ ಲೈಂಗಿಕ ಬಯಕೆಯನ್ನೂ ತೃಪ್ತಿಪಡಿಸಿಕೊಳ್ಳುತ್ತದೆ. ಜೊತೆಗೆ ಬೆರಳು ಚೀಪುವುದು, ಕಚ್ಚುವುದು ಹಾಗೂ ಬಾಯಿಯಲ್ಲಿ ಬಡಬಡಾಯಿಸುವ ಮೂಲಕ ತೃಪ್ತಿ ಹೊಂದುತ್ತದೆ. ಯಾವ ವ್ಯಕ್ತಿ ಸಮಾಜದ ಬಗ್ಗೆ ಹಾಗೂ ಬದುಕಿನ ಬಗ್ಗೆ ನಕಾರಾತ್ಮಕ ಭಾವನೆ ತಳೆದಿರುತ್ತಾನೋ ಅವನು ಬಾಯಿಯ ಹಂತದಲ್ಲಿ ಸಮಸ್ಯೆ ಅನುಭವಿಸಿರುತ್ತಾನೆ ಎಂದು ಫ್ರಾಯ್ಡ್ ಅಭಿಪ್ರಾಯ ಪಟ್ಟಿದ್ದಾನೆ. ಒಂದು ವೇಳೆ ಕಾಮವಾಂಭೆ ಮುಂದಿನ ಹಂತಕ್ಕೆ ಹೋಗದೆ ಬಾಯಿಯಲ್ಲಿಯೇ ಸ್ಥಿರೀಕರಣಗೊಂಡರೆ ಮುಂದೆ ಅವನು ಪರಾವಲಂಬಿ ಹಾಗೂ ಸೋಮಾರಿ ಬದುಕು ಬದುಕುತ್ತಾನೆ.

2. ಗುದದ ಹಂತ (Anal stage) (2-4 ವರ್ಷ) : ಸುಮಾರು ಎರಡರಿಂದ ಮೂರನೇ ವಯಸ್ಸಿನಲ್ಲಿ ಮಗು ಈ ಹಂತವನ್ನು ತಲಪುತ್ತದೆ. ಮಗು ಮಲವಿಸರ್ಜನೆಯನ್ನು ಸ್ವಲ್ಪಕಾಲ ತಡೆಹಿಡಿಯುವ ಮೂಲಕ ಲೈಂಗಿಕ ತೃಪ್ತಿ ಅನುಭವಿಸುತ್ತದೆ. ಕೆಲವು ಮಕ್ಕಳು 2-3 ದಿನಗಳ ಕಾಲ ಮಲವಿಸರ್ಜನೆ ಮಾಡದಿರುವುದುಂಟು! ಆಗ ಪೋಷಕರು ಗಾಬರಿಯಾಗಿ ವೈದ್ಯರ ಬಳಿ ಕರೆದುಕೊಂಡು ಹೋಗಿರುವುದುಂಟು. ಒಂದು ವೇಳೆ ಕಾಮವಾಂಛ ಈ ಹಂತದಲ್ಲಿಯೇ ಸ್ಥಿರೀಕರಣಗೊಂಡರೆ ಅಂದರೆ ಮುಂದಿನ ಹಂತಕ್ಕೆ ಹೋಗದಿದ್ದರೆ. ವ್ಯಕ್ತಿ ದೊಡ್ಡವನಾದ ಮೇಲೆ ಜಿಪುಣ, ಹಠಮಾರಿ ಹಾಗೂ ಪರನಿಂದಕನಾಗುತ್ತಾನೆ.

3. ಶಿಶ್ನದ ಹಂತ (Phallic Stage) (4-6 ವರ್ಷ): ಈ ಹಂತದಲ್ಲಿ ಅಂದರೆ ಸುಮಾರು 4-6 ವರ್ಷ ವಯಸ್ಸಿನಲ್ಲಿ ಕಾಮವಾಂಛ ಜನನೇಂದ್ರಿಯಗಳಲ್ಲಿ ಕೇಂದ್ರೀಕೃತವಾಗುತ್ತದೆ. ಈ ವಯಸ್ಸಿನಲ್ಲಿ ಹುಡುಗ-ಹುಡುಗಿಯರ ನಡುವಿನ ವ್ಯತ್ಯಾಸ ತಿಳಿಯುವರು ಮತ್ತು ತಂದೆ-ತಾಯಿಯರ ನಡುವಿನ ಲೈಂಗಿಕ ಸಂಬಂಧದ ಬಗ್ಗೆ ಅರಿವು ಹೊಂದುವರು. ಗಂಡು ಮಕ್ಕಳು ತಮ್ಮ ತಾಯಿಯರ ಬಗ್ಗೆ ಪ್ರೀತಿ ಹಾಗೂ ತಂದೆಯ ಬಗ್ಗೆ ದ್ವೇಷ ಬೆಳೆಸಿಕೊಳ್ಳುವರು. ಇದನ್ನು ‘ಈಡಿಪಸ್ ಕಾಂಪ್ಲೆಕ್ಸ್’ ಎಂದು ಫ್ರಾಯ್ಡ್ ಕರೆದನು. (ಗ್ರೀಕ್ ಪುರಾಣದಲ್ಲಿ ಈಡಿಪಸ್ ದೊರೆ ಅರಿಯದೆ ತನ್ನ ತಂದೆಯನ್ನು ಕೊಂದು ತನ್ನ ತಾಯಿಯನ್ನೇ ಮದುವೆಯಾಗುತ್ತಾನೆ). ಕ್ರಮೇಣ ಹುಡುಗರು ತಂದೆ-ತಾಯಿಯರ ಸಂಬಂಧವನ್ನು ಒಪ್ಪಿಕೊಂಡು ತಮ್ಮ ವರ್ತನೆಯಲ್ಲಿ ಬದಲಾವಣೆ ತಂದುಕೊಳ್ಳುತ್ತಾರೆ.

ಈ ವಯಸ್ಸಿನ ಹುಡುಗಿಯರು “ಇಲೆಕ್ಟ್ರಾ ಕಾಂಪ್ಲೆಕ್ಸ್” ಬೆಳೆಸಿಕೊಳ್ಳುವರು. ಅಂದರೆ ಹೆಣ್ಣು ಮಕ್ಕಳು ತಂದೆಯನ್ನು ಇಷ್ಟಪಡುತ್ತಾರೆ ಮತ್ತು ತಾಯಿಯನ್ನು ದ್ವೇಷಿಸುತ್ತಾರೆ. ಕ್ರಮೇಣ ಹೆಣ್ಣು ಮಕ್ಕಳ ವರ್ತನೆ ಬದಲಾಗಿ ತಾಯಿಯನ್ನು ಅನುಕರಿಸುವುದನ್ನು ಕಲಿಯುವರು.

4. ಸುಪ್ತ ಲೈಂಗಿಕ ಅವಧಿ (Latency Period) (6-12 ವರ್ಷ) : ಈ ಹಂತದಲ್ಲಿ ಲೈಂಗಿಕ ಬಯಕೆ ಮಕ್ಕಳಲ್ಲಿ ಸುಪ್ತವಾಗಿರುತ್ತದೆ ಮತ್ತು ದೈಹಿಕ ಮತ್ತು ಮಾನಸಿಕ ಬೆಳವಣಿಗೆ ತೀವ್ರಗತಿಯಲ್ಲಿ ಸಾಗುತ್ತದೆ. ಓದು-ಬರಹ, ಕ್ರೀಡೆ, ಗೆಳೆಯರು, ಇತ್ಯಾದಿ ಕಡೆ ಮಕ್ಕಳು ಗಮನ ಹರಿಸುತ್ತಾರೆ.

5. ಜನನೇಂದ್ರಿಯ ಹಂತ (genital stage) (13+ವರ್ಷ) : ಈ ಅವಧಿಯಲ್ಲಿ ತಾರುಣ್ಯ ಉದಯಿಸುತ್ತದೆ. ತಮ್ಮ ವಿರುದ್ಧ ಲಿಂಗದವರ ಜೊತೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಕಲಿಯುವರು ಮತ್ತು ಲಿಂಗಾನುಸಾರ ನಡವಳಿಕೆಗಳನ್ನು ರೂಢಿಸಿಕೊಂಡು ಇತರ ಸಾಮಾನ್ಯ ಜನರಂತೆ ಬದುಕು ಸಾಗಿಸುವರು.

ಅಹಂ ರಕ್ಷಣಾ ತಂತ್ರಗಳು (Defence Mechanisms):

ಮಾನವನ ಅನೇಕ ವರ್ತನೆಗಳು ಉದ್ವಿಗ್ನತೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನಗಳಾಗಿರುತ್ತವೆ. ಆದ್ದರಿಂದ ವ್ಯಕ್ತಿಯ ಅಹಂ ಉದ್ವಿಗ್ನತೆಯನ್ನು ಹೇಗೆ ನಿಭಾಯಿಸುತ್ತದೆ ಎಂಬುದು ವ್ಯಕ್ತಿಯ ವರ್ತನೆಯನ್ನು ನಿರ್ಧರಿಸುತ್ತದೆ. ಆದ್ದರಿಂದ ವ್ಯಕ್ತಿ ಉದ್ವಿಗ್ನತೆಯಿಂದ ತಪ್ಪಿಸಿಕೊಳ್ಳಲು ಮತ್ತು ತನ್ನ ಅಹಂ ಅನ್ನು ರಕ್ಷಿಸಿಕೊಳ್ಳಲು ಅಹಂ ರಕ್ಷಣಾ ತಂತ್ರಗಳ ಮೊರೆ ಹೋಗುತ್ತಾನೆ. ಅಹಂ ರಕ್ಷಣಾ ತಂತ್ರಗಳು ಉದ್ವಿಗ್ನತೆಯನ್ನು ಕಡಿಮೆ ಮಾಡುವ ಪರೋಕ್ಷ ವಿಧಾನಗಳಾಗಿವೆ. ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಅಹಂ ರಕ್ಷಣಾ ತಂತ್ರಗಳನ್ನು ಅನುಸರಿಸುತ್ತಾರೆ. ಆದರೆ ಅದನ್ನು ಅತಿಯಾಗಿ ಪದೇ ಪದೇ ಅನುಸರಿಸಿದಾಗ ವ್ಯಕ್ತಿ ವಾಸ್ತವಿಕತೆಯಿಂದ ದೂರ ಸರಿದು ಮನೋರೋಗಿಯಾಗುವ ಸಾಧ್ಯತೆ ಇರುತ್ತದೆ.

ಸಿಗಂಡ್ ಫ್ರಾಯ್ಡ್. ವ್ಯಕ್ತಿ ಅನುಸರಿಸುವ ಅನೇಕ ಅಹಂ ರಕ್ಷಣಾ ತಂತ್ರಗಳನ್ನು ವಿವರಿಸಿದ್ದಾನೆ. ಅವುಗಳಲ್ಲಿ ಪ್ರಮುಖವಾದವುಗಳು ಕೆಳಕಂಡಂತಿವೆ.

1) ದಮನ ಮಾಡುವುದು (Repression):

ಉದ್ವಿಗ್ನತೆಯನ್ನು ಉಂಟುಮಾಡುವ ವರ್ತನೆಗಳನ್ನು ಅಥವಾ ಆಲೋಚನೆಗಳನ್ನು ನಮ್ಮ ಸುಪ್ತ ಮನಸ್ಸು ಅಂತರಾಳಕ್ಕೆ ದೂಡುವುದಕ್ಕೆ ದಮನ ಮಾಡುವುದು ಎನ್ನುವರು. ದಮನ ಮಾಡಲ್ಪಟ್ಟ ಆಲೋಚನೆಗಳು ಆಗಾಗ ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಉದಾಹರಣೆಗೆ: ಬಾಲ್ಯದಲ್ಲಿ ನಡೆದ ಲೈಂಗಿಕ ದೌರ್ಜನ್ಯಗಳು ದಮನ ಮಾಡಲ್ಪಡುವುದರಿಂದ ಅವು ಸುಲಭದಲ್ಲಿ ನೆನಪಿಗೆ ಬರುವುದಿಲ್ಲ. ಸೂಕ್ತ ಚಿಕಿತ್ಸಕನಿಂದ ಮಾತ್ರ ಆ. ಘಟನೆಯನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಬಹುದು.

2) ಬಾಹ್ಯಾರೋಪಣೆ (Projection):

ವ್ಯಕ್ತಿ ತನ್ನ ಲೋಪದೋಷಗಳನ್ನು, ಆಸೆ ಆಕಾಂಕ್ಷೆಗಳನ್ನು, ಘರ್ಷಣೆಗಳನ್ನು ಅನ್ಯವ್ಯಕ್ತಿ ಅಥವಾ ಆನ್ಯ ವಸ್ತು ಅಥವಾ ಅನ್ಯ ಸನ್ನಿವೇಶದ ಮೇಲೆ ಆರೋಪಿಸುವುದಕ್ಕೆ ಬಾಹ್ಯಾರೋಪಣೆ ಎನ್ನುವರು. “ತಾನು ಕಳ್ಳ ಪರರ ನಂಬ” ಎಂಬ ಗಾದೆ ಮಾತು ಬಂದಿರುವುದು ಈ ರಕ್ಷಣಾ ತಂತ್ರದಿಂದ. ಉದಾ:ಪರೀಕ್ಷೆಯಲ್ಲಿ ನಕಲು ಮಾಡಿ ಉತ್ತೀರ್ಣನಾದ ವಿದ್ಯಾರ್ಥಿ ಇತರರೂ ಕೂಡ ತನ್ನ ಹಾಗೆಯೇ ನಕಲು ಮಾಡಿ ಉತ್ತೀರ್ಣರಾಗಿದ್ದಾರೆ ಎಂದು ಆರೋಪಿಸುವುದು. ವ್ಯಭಿಚಾರಿ ಗಂಡನಾದವನು ತನ್ನ ಪತ್ನಿಯ ಶೀಲವನ್ನು ಶಂಕಿಸುವುದು, ಮುಂತಾದವು ಬಾಹ್ಯಾರೋಪಣೆ ಅಹಂ ರಕ್ಷಣಾ ತಂತ್ರಕ್ಕೆ ಉದಾಹರಣೆಯಾಗಿವೆ.

ಬಾಹ್ಯಾರೋಪಣೆಯಿಂದ ತಾತ್ಕಾಲಿಕವಾಗಿ ನೆಮ್ಮದಿ ಸಿಗಬಹುದಾದರೂ ಅದು ಅತಿಯಾದರೆ ಸಂಭ್ರಾಂತಿ (Paranoia) ಎಂಬ ಮನೋರೋಗಕ್ಕೆ ಈಡಾಗಬಹುದು.

3) ಹಿನ್ನಡೆ (Regression):

ವ್ಯಕ್ತಿ ತನ್ನ ವಯಸ್ಸಿಗಿಂತ ಕೆಳಹಂತದ ವಯಸ್ಸಿನವರ ವರ್ತನೆಗಳನ್ನು ತೋರುವುದೇ ಹಿನ್ನಡೆ, ಉದಾ: ಮುದುಕನು ಯುವಕನಂತೆ ಹಾಗೆಯೇ ಯುವಕನು ಬಾಲಕನಂತೆ ವರ್ತಿಸುವುದು. ಇದರ ಉದ್ದೇಶ ಇತರರ ಗಮನವನ್ನು ಸೆಳೆಯುವುದು. ದೊಡ್ಡ ಮಕ್ಕಳು ಎಳೆಯ ಮಕ್ಕಳಂತೆ ಹಟ ಮಾಡುವುದು. ಅಳುವುದು, ಬೆರಳು ಚೀಪುವುದು ಮುಂತಾದವು ಹಿನ್ನಡೆಯ ಲಕ್ಷಣಗಳಾಗಿವೆ.

4) ಭಾವ ಪಲ್ಲಟ:(Displacement):

ವ್ಯಕ್ತಿ ತನ್ನ ಸಿಟ್ಟನ್ನು ಉದ್ದೇಶಿತ ವ್ಯಕ್ತಿ ಅಥವಾ ವಸ್ತು ಅಥವಾ ಸನ್ನಿವೇಶದ ಮೇಲೆ ವ್ಯಕ್ತಪಡಿಸಲು ಸಾಧ್ಯವಾಗದೆ, ತನ್ನ ಮಾನಸಿಕ ಸೆಟೆತವನ್ನು ಕಡಿಮೆ ಮಾಡಿಕೊಳ್ಳಲು ಅಪಾಯಕಾರಿಯಲ್ಲದ ವ್ಯಕ್ತಿ ಅಥವಾ ಸನ್ನಿವೇಶದ ಮೇಲೆ ವ್ಯಕ್ತಪಡಿಸುವುದಕ್ಕೆ ಭಾವಪಲ್ಲಟ ಎನ್ನುವರು. ಉದಾ:ಮೇಲಧಿಕಾರಿಯಿಂದ ನಿಂದನೆಗೆ ಒಳಗಾದ ನೌಕರನು, ತನ್ನ ಸಿಟ್ಟನ್ನು ಮನೆಯಲ್ಲಿ ತನ್ನ ಹೆಂಡತಿ ಅಥವಾ ಮಕ್ಕಳ ಮೇಲೆ ತೋರಿಸುವುದು ಅಥವಾ ಕಛೇರಿಯಲ್ಲಿ ಕಡತಗಳನ್ನು ಎತ್ತಿ ಬಿಸಾಡುವುದು ಮುಂತಾದ ವರ್ತನೆಗಳ ಮೂಲಕ ಮಾನಸಿಕ ಸೆಟೆತವನ್ನು ಕಡಿಮೆ ಮಾಡಿಕೊಳ್ಳುವನು.

5) ಪ್ರತಿಕ್ರಿಯಾ ರೂಪನ: (Reaction formation):

ತನ್ನ ಅಂತರಂಗದ ಉದ್ದೇಶಗಳಿಗೆ ವಿರುದ್ಧವಾದ ವರ್ತನೆಯನ್ನು ತೋರುವುದೇ ಪ್ರತಿಕ್ರಿಯಾರೂಪಣ. ಉದಾ:ಕ್ರೂರಿಯಾದ ವ್ಯಕ್ತಿ ಸಂಭಾವಿತನಂತೆ ನಟಿಸುವುದು, ತಾನು ಪ್ರಾಮಾಣಿಕನೆಂದು ಪದೇ ಪದೇ ಹೇಳುವ ವ್ಯಕ್ತಿ ವಾಸ್ತವಿಕವಾಗಿ ಅತಿಭ್ರಷ್ಟನಾಗಿರುವುದು, ಮುಂತಾದವು ಪ್ರತಿಕ್ರಿಯಾ ಅಹಂರಕ್ಷಣಾ ತಂತ್ರಕ್ಕೆ ಉದಾಹರಣೆಗಳು.

6) ಉದಾತ್ತಿಕರಣ (Sublimation):

ವ್ಯಕ್ತಿ ತನ್ನಲ್ಲಿರುವ ತೀವ್ರವಾದ ಲೈಂಗಿಕ ಬಯಕೆಯನ್ನು, ಹಿಂಸಾತ್ಮಕ ಪ್ರವೃತ್ತಿಯನ್ನು ಸಾಮಾಜಿಕ ಕಟ್ಟುಪಾಡುಗಳಿಂದಾಗಿ ನೇರವಾಗಿ ವ್ಯಕ್ತಪಡಿಸಲು ಸಾಧ್ಯವಾಗದೆ ಅವುಗಳನ್ನು ಪಳಗಿಸಿ ಸಮಾಜ ಒಪ್ಪುವ ರೀತಿಯಲ್ಲಿ ವ್ಯಕ್ತಪಡಿಸಿ ಮಾನಸಿಕ ಸೆಟೆತವನ್ನು ಕಡಿಮೆಮಾಡಿಕೊಳ್ಳುವುದೇ ಉದಾತ್ತೀಕರಣ. ಉದಾ: ಒಬ್ಬ ಯುವಕ ತನ್ನ ಪ್ರೀತಿಯನ್ನು ನೇರವಾಗಿ ಹೇಳಿಕೊಳ್ಳಲು ಹೆದರಿ ಪ್ರೀತಿ ಕಥೆ ಅಥವಾ ಕವನಗಳ ರೂಪದಲ್ಲಿ ವ್ಯಕ್ತಪಡಿಸಿ ಮಾನಸಿಕ ಸೆಟೆತವನ್ನು ಕಡಿಮೆ ಮಾಡಿಕೊಳ್ಳುವುದು. ಒಬ್ಬ ಹಿಂಸಾತ್ಮಕ ಪ್ರವೃತ್ತಿಯ ವ್ಯಕ್ತಿ ಒಳ್ಳೆಯ ಬಾಕ್ಸಿಂಗ್ ಪಟು ಅಥವಾ ಶಸ್ತ್ರಚಿಕಿತ್ಸಾ ತಜ್ಞನಾಗುವುದು ಮುಂತಾದವು.

ಮನೋವಿಶ್ಲೇಷಣಾ ತಜ್ಞರ ಪ್ರಕಾರ ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಆಗಿರುವ ಸಾಧನೆ ಲೈಂಗಿಕ ಬಯಕೆಯ ಉದಾತ್ತೀಕರಣ ರೂಪ.

7) ಹುಸಿ ಸಮರ್ಥನೆ ಅಥವಾ ತಾರ್ಕಿಕ ಸೋಗು (Rationalization):

ತಮ್ಮ ಆತ್ಮಗೌರವವನ್ನು ಕಾಪಾಡಿಕೊಳ್ಳಲು ಮತ್ತು ಇತರರಿಂದ ಒಳ್ಳೆಯ ಅಭಿಪ್ರಾಯ ಗಿಟ್ಟಿಸಲು, ನಿಜವಾದ ಕಾರಣಗಳಿಗೆ ಬದಲಾಗಿ ಒಳ್ಳೆಯ ಕಾರಣಗಳನ್ನು ನೀಡುವುದೇ ಹುಸಿ ಸಮರ್ಥನೆ.

ಹುಸಿ ಸಮರ್ಥನೆಯಲ್ಲಿ ಎರಡು ವಿಧ.

1) ಕೈಗೆಟುಕದ ದ್ರಾಕ್ಷಿ ಹುಳಿ

2) ಪಾಲಿಗೆ ಬಂದದ್ದು ಪಂಚಾಮೃತ.

ಉದಾ: ಹುಡುಗಿಯ ಪ್ರೀತಿಯನ್ನು ಗಳಿಸಲು ವಿಫಲನಾದ ಹುಡುಗ ಆಕೆಯ ನಡತೆ ಸರಿಯಿಲ್ಲ ಎಂದು ಹೇಳುವುದು, ಕೇವಲ ತೃತೀಯ ದರ್ಜೆಯಲ್ಲಿ ಉತ್ತೀರ್ಣನಾದ ವ್ಯಕ್ತಿ, ಈ ಕಾಲದಲ್ಲಿ ರ್ಯಾಂಕ್ ಬಂದರೂ ಕೆಲಸ ಸಿಗುವುದಿಲ್ಲ. ಆದ್ದರಿಂದ ಕೇವಲ ಪಾಸಾಗಿದ್ದೇ ಒಳ್ಳೆಯದಾಯಿತು ಎಂದು ಸಮಾಧಾನ ಪಟ್ಟುಕೊಳ್ಳುವುದು ಮುಂತಾದವು.

8) ತಾದಾತ್ಮತೆ (Identification):

ತನ್ನ ಆದರ್ಶ ವ್ಯಕ್ತಿಯ ರೀತಿ-ನೀತಿ, ನಡೆ-ನುಡಿ, ವೇಷ-ಭೂಷಣ, ಹಾವ-ಭಾವ ಪ್ರದರ್ಶಿಸುವುದೇ ತಾದಾತ್ಮತೆ. ಉದಾ: ಒಬ್ಬ ಸಿನಿಮಾ ನಟನನ್ನು ಆರಾಧಿಸುವ ವ್ಯಕ್ತಿ ಆ ನಟನಂತೆಯೇ ವರ್ತಿಸುವುದು.

ಈ ರೀತಿ ವಿವಿಧ ಅಹಂ ರಕ್ಷಣಾ ತಂತ್ರಗಳನ್ನು ಜನರು ತಮ್ಮ ಬದುಕಿನಲ್ಲಿ ಆಗಾಗ ತೋರುತ್ತಾರೆ. ಇದರಿಂದ ತಾತ್ಕಾಲಿಕವಾಗಿ ನೆಮ್ಮದಿ ದೊರೆಯಬಹುದು. ಆದರೆ ಅತಿಯಾದರೆ ಮನೋರೋಗಕ್ಕೆ ದಾರಿಮಾಡಿ ಕೊಡಬಹುದು.

ತನ್ನ ಆದರ್ಶ ವ್ಯಕ್ತಿಯ ರೀತಿ-ನೀತಿ, ನಡೆ-ನುಡಿ, ವೇಷ-ಭೂಷಣ, ಹಾವ-ಭಾವ ಪ್ರದರ್ಶಿಸುವುದೇ ತಾದಾತ್ಮತೆ. ಉದಾ: ಒಬ್ಬ ಸಿನಿಮಾ ನಟನನ್ನು ಆರಾಧಿಸುವ ವ್ಯಕ್ತಿ ಆ ನಟನಂತೆಯೇ ವರ್ತಿಸುವುದು.

ಈ ರೀತಿ ವಿವಿಧ ಅಹಂ ರಕ್ಷಣಾ ತಂತ್ರಗಳನ್ನು ಜನರು ತಮ್ಮ ಬದುಕಿನಲ್ಲಿ ಆಗಾಗ ತೋರುತ್ತಾರೆ. ಇದರಿಂದ ತಾತ್ಕಾಲಿಕವಾಗಿ ನೆಮ್ಮದಿ ದೊರೆಯಬಹುದು. ಆದರೆ ಅತಿಯಾದರೆ ಮನೋರೋಗಕ್ಕೆ ದಾರಿಮಾಡಿ ಕೊಡಬಹುದು.

ಎರಿಕ್‌ಸನ್ ಪ್ರಕಾರ ವ್ಯಕ್ತಿ ಸಮಾಜದಲ್ಲಿ ಹುಟ್ಟಿ ಬೆಳೆಯುವಾಗ ಸಮಾಜ ಮತ್ತು ಸಂಸ್ಕೃತಿ ವ್ಯಕ್ತಿಯ ಬೆಳವಣಿಗೆ ಕಾಲದಲ್ಲಿ ಅನೇಕ ಸವಾಲುಗಳನ್ನೊಡ್ಡುತ್ತವೆ. ನಮ್ಮ ಜೀವಮಾನದಲ್ಲಿ, ವಿಕಾಸದ ಕಾಲದಲ್ಲಿ, ನಿರಂತರ ಬದಲಾವಣೆಗಳನ್ನು ಕಾಣುತ್ತೇವೆ. ಈ ಬದಲಾವಣೆಗಳನ್ನು ಎಂಟು ಹಂತಗಳ ಮನೋಸಾಮಾಜಿಕ ಬೆಳವಣಿಗೆ ಹಂತಗಳು ಎನ್ನುತ್ತೇವೆ.

ಎರಿಕ್‌ಸನ್ ಪ್ರಕಾರ ಪ್ರತಿ ಹಂತದಲ್ಲೂ ಕೆಲವು ಸವಾಲುಗಳು ಎದುರಾಗುತ್ತವೆ. ಆ ಸವಾಲುಗಳನ್ನು ಪರಿಹರಿಸಿಕೊಳ್ಳಬೇಕಾದ ಅಗತ್ಯ ಇರುತ್ತದೆ. ಆ ಪ್ರಕಾರ ಆತ ಹೇಳಿರುವ ಎಂಟೂ ಹಂತಗಳ ಸವಾಲುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಜೋಡಿಯಿಂದ ಪ್ರತಿನಿಧಿಸಲ್ಪಡುತ್ತವೆ. ಯಾವುದೇ ಸವಾಲು ಸಂಪೂರ್ಣವಾಗಿ ಪರಿಹಾರವಾಗುವುದಿಲ್ಲ. ಆದರೂ ಕೂಡ ನಾವು ಸಾಧ್ಯವಾದಷ್ಟು ಮಟ್ಟಿಗೆ ಸವಾಲುಗಳನ್ನು ಎದುರಿಸಿ. ಮುನ್ನಡೆಯಬೇಕಾಗುತ್ತದೆ.

ಎಂಟು ಮನೋ-ಸಾಮಾಜಿಕ ಬೆಳವಣಿಗೆ ಹಂತಗಳನ್ನು ತಿಳಿಯೋಣ.

1. ನಂಬಿಕೆ ವಿರುದ್ಧ ಅಪನಂಬಿಕೆ (Trust V/S Mistrust) (ಹುಟ್ಟಿನಿಂದ 14 ವರ್ಷ):

ಇದು ಮನೋಸಾಮಾಜಿಕ ಬೆಳವಣಿಗೆಯ ಮೊದಲನೇ ಹಂತ. ಈ ಹಂತದಲ್ಲಿ ಮಗುವಿನ ದೈಹಿಕ ಹಾಗೂ ಮಾನಸಿಕ ಅಗತ್ಯಗಳು ಸರಿಯಾಗಿ ಪೂರೈಕೆಯಾದರೆ ಮಗು ಸಮಾಜದ ಬಗ್ಗೆ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳುತ್ತದೆ. ಒಂದು ವೇಳೆ ಈ ಹಂತದಲ್ಲಿ ಮಗುವಿನ ಅಗತ್ಯಗಳು ಸರಿಯಾಗಿ ಪೂರೈಕೆಯಾಗದಿದ್ದರೆ ಆಗ ಮಗುವಿನಲ್ಲಿ ನಕಾರಾತ್ಮಕ ಮನೋಭಾವ ಬೆಳೆಯುತ್ತದೆ. ಮಗು ತನ್ನ ಮುಂದಿನ ಹಂತದ ಸವಾಲುಗಳನ್ನು ಎದುರಿಸುವಲ್ಲಿ ಅಸಮರ್ಥತೆ ತೋರುತ್ತದೆ.

Leave a Comment